ಸೌದಿ ಅರೇಬಿಯಾ:
ಸೌದಿ ಅರೇಬಿಯಾದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಸಚಿವಾಲಯ ತಿಳಿಸಿದೆ.ಇಂದು ನಸುಕಿನ ಜಾವ ಈ ಘಟನೆ ವರದಿಯಾಗಿದೆ. ಈ ಹಿಂದೆ ಯೆಮನ್ ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ದಾಳಿಯ ಹೊಣೆಯನ್ನು ಇದುವರೆಗೆ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಲು ತಿಳಿಸಿದ್ದಾರೆ.
ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಆಗಿರುವ ಹಾನಿ ವಿವರ ಇನ್ನು ಸಿಕ್ಕಿಲ್ಲ ಎನ್ನಲಾಗಿದೆ. ಆನ್ ಈ ಸ್ಥಳವನ್ನು ಡ್ರೋನ್ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ನಂತರ ಬೆಂಕಿ ಕಾಣಿಸಿಕೊಂಡಿತು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.
ಬುಕ್ಯಾಕ್‌ನಲ್ಲಿರುವ ಅಬ್ಕೈಕ್ ತೈಲ ಸಂಸ್ಕರಣಾ ಘಟಕವುವಿಶ್ವದ ಅತಿದೊಡ್ಡ ಕಚ್ಚಾ ತೈಲ ಸ್ಥಿರೀಕರಣ ಘಟಕವಾಗಿದೆ. ಇಲ್ಲಿ ಕಚ್ಚಾ ತೈಲವನ್ನು ಸಿಹಿ ಕಚ್ಚಾ ತೈಲ ಆಗಿ ಪರಿವರ್ತಿಸಿ ನಂತರ ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಟ್ರಾನ್ಸ್‌ಶಿಪ್ಮೆಂಟ್ ಪಾಯಿಂಟ್‌ಗಳಿಗೆ ಸಾಗಿಸುತ್ತದೆ. ಇಲ್ಲಿ ದಿನಕ್ಕೆ 7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.ಈ ಘಟಕದ ಮೇಲೆ ಹಿಂದೆ ಉಗ್ರಗಾಮಿಗಳು ದಾಳಿ ನಡೆಸಲು ಸಂಚು ರೂಪಿಸಿದ್ದರು. 2006ರಲ್ಲಿ ಆಲ್ ಖೈದಾ ಆತ್ಮಹತ್ಯಾ ದಾಳಿಕೋರ ತೈಲ ಸಂಕೀರ್ಣದ ಮೇಲೆ ದಾಳಿ ನಡೆಸಲು ನೋಡಿ ವಿಫಲನಾಗಿದ್ದ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
