ಆಡಳಿತ ಮಂಡಳಿಯಿಂದ ನಿರ್ಗಮಿಸಿದ ನಿಸಾನ್‌ ಮಾಜಿ ಮುಖ್ಯಸ್ಥ

ಟೋಕ್ಯೊ

         ಹಣ ದುರುಪಯೋಗ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಕಂಪನಿಯ ಮಾಜಿ ಮುಖ್ಯಸ್ಥ ಕಾರ್ಲೋಸ್‌ ಘೋಸನ್‌ ಅವರನ್ನು ಜಪಾನ್‌ನ ವಾಹನ ಉತ್ಪಾದನಾ ಕ್ಷೇತ್ರದ ದಿಗ್ಗಜ ನಿಸಾನ್‌ ತನ್ನ ಆಡಳಿತ ಮಂಡಳಿಯಿಂದಲೂ ತೆಗೆದು ಹಾಕಿದೆ

        ಸೋಮವಾರ ನಡೆದ ಕಂಪನಿಯ ಷೇರುದಾರರ ಸಭೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಜಾಮೀನಿನ ಮೇಲೆ ಹೊರಬಂದಿದ್ದ ಘೋಸನ್‌, ಕಳೆದ ವಾರ ಮತ್ತೆ ಬಂಧನಕ್ಕೊಳಗಾಗಿದ್ದರು ಎಂದು ಬಿಬಿಸಿ ವರದಿ ಮಾಡಿದೆ.ಘೋಸನ್‌ ಬಲಗೈ ಬಂಟ ಜಾರ್ಜ್‌ ಗ್ರೇಗ್‌ ಅವರನ್ನು ಕಂಪನಿಯಿಂದ ಹೊರಹಾಕಲು ಮತ್ತು ರೆನಾಲ್ಟ್‌ ಅಧ್ಯಕ್ಷ ಡೊಮಿನಿಕ್ಯು ಸೆನಾರ್ಡ್‌ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲು ಷೇರುದಾರರು ಮತ ಹಾಕಿದ್ದಾರೆ.

         2018ರ ನವೆಂಬರ್‌ನಲ್ಲಿ ಘೋಸನ್‌ ಹಣಕಾಸು ಅಕ್ರಮದಲ್ಲಿ ತೊಡಗಿಸಿಕೊಂಡ ಆರೋಪ ಬಂದಾಗ ಅವರನ್ನು ನಿಸಾನ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap