ಪಾಕಿಸ್ತಾನ
ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸರ್ಫರಾಜ್ ಎಂಬವರು ಕೊರೊನಾ ವೈಸರ್‌ಗೆ ಬಲಿಯಾಗಿದ್ದು . ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ನಿಗಾದಲ್ಲಿಡಲಾಗಿತ್ತು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 50 ವರ್ಷದ ಸರ್ಫರಾಜ್ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೇಶಾವರದ ಖಾಸಗಿ ಆಸ್ಪತ್ರೆಯಲ್ಲಿ ಜಾಫರ್ ಸರ್ಫರಾಜ್ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಕಳೆದ ಮೂರು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಜಾಫರ್ ಸರ್ಫರಾಜ್ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ ಪಾಕಿಸ್ತಾನದ ಮೊದಲ ವೃತ್ತಿಪರ ಕ್ರಿಕೆಟಿಗನಾಗಿದ್ದಾರೆ. ಸರ್ಫರಾಜ್ 1988 ರಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಪೇಶಾವರ ಪರ 15 ಪ್ರಥಮ ದರ್ಜೆ ಪಂದ್ಯಗಳಿಂದ 616 ರನ್ ಗಳಿಸಿದರು.
1994 ರಲ್ಲಿ ನಿವೃತ್ತಿಯಾಗುವ ಮೊದಲು ಆರು ಏಕದಿನ ಪಂದ್ಯಗಳಲ್ಲಿ 96 ರನ್ ಗಳಿಸುವಲ್ಲಿ ಯಶಸ್ವಿಯಾದರು. ನಂತರ ಅವರು 2000 ರ ದಶಕದ ಮಧ್ಯಭಾಗದಲ್ಲಿ ಹಿರಿಯ ಮತ್ತು 19 ವರ್ಷದೊಳಗಿನ ಪೇಶಾವರ್ ತಂಡಗಳಿಗೆ ತರಬೇತು ದಾರರಾಗಿದ್ದರು. ಜಾಫರ್ ಪಾಕಿಸ್ತಾನದ ಅಂತರರಾಷ್ಟ್ರೀಯ ಆಟಗಾರ ಅಖ್ತರ್ ಸರ್ಫರಾಜ್ ಅವರ ಸಹೋದರ. ಕರುಳಿನ ಕ್ಯಾನ್ಸರ್ನಿಂದ ಅಖ್ತರ್ 10 ತಿಂಗಳ ಹಿಂದೆಯಷ್ಟೇ ನಿಧನರಾದರು.ಪಾಕಿಸ್ತಾನದಲ್ಲಿ ಈವರೆಗೆ 5700ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಪೇಶಾವರ ನಗರದಲ್ಲೇ 744 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
