ಎಫ್ಎಟಿಎಫ್ ನಿಂದ ಪಾಕ್ ಗೆ ಮತ್ತೊಂದು ಆಘಾತ..!

ಪ್ಯಾರಿಸ್

     ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಚಟುವಟಿಕೆ ಮಢಲಡ ಕಣಿಡುವ ಎಫ್ಎಟಿಎಫ್ ಕೆಂಗಣ್ಣಿಗೆ ಪಾಕಿಸ್ತಾನ ಮತ್ತೊಮ್ಮೆ ಗುರಿಯಾಗಿದೆ. ಪಾಕಿಸ್ತಾನಕ್ಕೆ ಭಯೋತ್ಪಾದನೆ ಮಟ್ಟ ಹಾಕಲು ಅಂತಿಮ ಎಚ್ಚರಿಕೆ ನೀಡಲಾಗಿದ್ದು ಅದು ಈಡೇರದಿದ್ದರೆ ಪಾಕಿಸ್ತಾನವನ್ನು ಡಾರ್ಕ್ ಗ್ರೆ ಪಟ್ಟಿಗೆ ಸೇರಿಸಲಾಗುವುದು ಎಂದು ಎಫ್ ಎ ಟಿ ಎಫ್ ತಿಳಿಸಿದೆ.

    ಎಫ್ಎಟಿಎಫ್  ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ನೀಡಿದ ಸೂಚನೆ ಪ್ರಕಾರ ಪಾಕಿಸ್ತಾನವನ್ನು ಇತರ ಸದಸ್ಯ ರಾಷ್ಟ್ರಗಳಿಂದ ಪ್ರತ್ಯೇಕವಾಗಿಡುವ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ ಎನ್ನಲಾಗಿದೆ.

   ಎಫ್ಎಟಿಎಫ್ ನಿಂದ ವಿಧಿಸಲಾಗಿದ್ದ 27 ನಿಬಂದನೆಗಳ ಪೈಕಿ ಪಾಕಿಸ್ತಾನ ಕೇವಲ 6 ನಿಬಂಧನೆ ಪೂರೈಸುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ಪಾಕಿಸ್ತಾನ ಕುರಿತು ತನ್ನ ನಿರ್ಧಾರವನ್ನು ಇದೇ 18ಕ್ಕೆ ಅಂತಿಮಗೊಳಿಸಲಿದೆ.ಎಫ್ಎಟಿಎಫ್ ನಿಯಮ ಪ್ರಕಾರ, ಗ್ರೆ ಲಿಸ್ಟ್ ಮತ್ತು  ಬ್ಲಾಕ್ ಪಟ್ಟಿ ಮಧ್ಯೆ ಒಂದು ಅಗತ್ಯದ ಹಂತವಿದ್ದು ಅದನ್ನು ಬ್ಲಾಕಿಶ್ ಗ್ರೇ ಪಟ್ಟಿ ಎನ್ನಲಾಗುತ್ತದೆ. ಇದರರ್ಥ, ಬಲವಾದ ಎಚ್ಚರಿಕೆಯನ್ನು ದೇಶಕ್ಕೆ ನೀಡುವುದಾಗಿದ್ದು ಈ ಮೂಲಕ ತನ್ನನ್ನು ತಿದ್ದುಕೊಂಡು ಸುಧಾರಿಸಿಕೊಳ್ಳಲು ಸಂಬಂಧಪಟ್ಟ ದೇಶಕ್ಕೆ ಕೊನೆಯ ಅವಕಾಶವಾಗಿರುತ್ತದೆ. ಮೂರನೇ ಹಂತದವರೆಗೆ ಎಚ್ಚರಿಕೆಯ ಸಂದೇಶವನ್ನು ಕಪ್ಪು ಬೂದು ಪಟ್ಟಿ ಎಂದು ಕರೆಯಲಾಗುತ್ತದೆ. ಇದೀಗ ಎಫ್ಎಟಿಎಫ್ ಕೊನೆಯ ಎಚ್ಚರಿಕೆ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದು ಅದು ನಾಲ್ಕನೇ ಹಂತದ್ದಾಗಿದೆ.ಇದರಿಂದಾಚೆಗೆ ಯಾವುದೇ ರೀತಿಯ ಆರ್ಥಿಕ ಸಹಾಯವಾಗಲಿ ಮಿಲಿಟರಿ ಸಹಾಯವಾಗಲಿ ಸಿಗುವುದಿಲ್ಲ ಎಂದು ಎಫ್ ಎ ಟಿ ಎಫ್ ತಿಳಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap