ಮಿಯಾಮಿ
ನಿನ್ನೆ ನಡೆದ ಮಿಯಾಮಿ ಓಪನ್ ಟೂರ್ನಿಯಲ್ಲಿ ಜಾನ್ ಐಸ್ನರ್ ಅವರನ್ನು ಮಣಿಸುವ ಮೂಲಕ ವಿಶ್ವ ಶ್ರೇಷ್ಠ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಮಿಯಾಮಿ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಇದರೊಂದಿಗೆ ವೃತ್ತಿ ಜೀವನದಲ್ಲಿ ೧೦೧ನೇ ಬಾರಿ ಪ್ರಶಸ್ತಿ ಗೆದ್ದ ಕೀರ್ತಿಗೆ ಸ್ವಿಜರ್ಲೆಂಡ್ ಆಟಗಾರ ಭಾಜನರಾದರು.
64 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಮೆರಿಕದ ಜಾನ್ ಐಸ್ನರ್ ಅವರ ವಿರುದ್ಧ ಪಾರಮ್ಯ ಮೆರೆದ ಫೆಡರರ್, 6-1,6-4 ಅಂತರದಲ್ಲಿ ಗೆಲುವು ಸಾಧಿಸಿ ಮಿಯಾಮಿ ಓಪನ್ ಚಾಂಪಿಯನ್ ಆಗಿ ನೂತನ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಇದರೊಂದಿಗೆ ಅವರು ನಾಲ್ಕನೇ ಬಾರಿ ಮಿಯಾಮಿ ಓಪನ್ ಕಿರೀಟ ಮುಡಿಗೇರಿಸಿದ ಹೆಮ್ಮೆಗೆ ಫೆಡರರ್ ಪಾತ್ರರಾಗಿದ್ದಾರೆ.
ಫೈನಲ್ ಪಂದ್ಯದಲ್ಲಿ ಯೋಜನೆ ರೂಪಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ, ಅಂತಿಮ ಹಣಾಹಣಿಯಲ್ಲಿ ಹೇಗೆ ಆಡಬೇಕೆಂದು ಮೊದಲೇ ಅರಿತಿದ್ದೆ. ಹಾಗಾಗಿ, ಪಂದ್ಯದಲ್ಲಿ ಗೆಲ್ಲಲು ಸುಲಭವಾಯಿತು. ಮಿಯಾಮಿ ಓಪನ್ ಚಾಂಪಿಯನ್ ಆಗಿರುವುದು ಅತ್ಯಂತ ಖುಷಿ ತಂದಿದೆ? ಎಂದು ೩೭ ಪ್ರಾಯದ ಸ್ವಿಸ್ ಆಟಗಾರ ಫೆಡರರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/f2318-15540833045679-800.gif)