ವಾಷಿಂಗ್ಟನ್
ಸ್ವಿಜರ್ಲೆಂಡ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಮಿಯಾಮಿ ಓಪನ್ ಸೆಮಿ ಫೈನಲ್ ಪಂದ್ಯದಲ್ಲಿ ಶೆ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯ ನಾಲ್ಕರ ಘಟ್ಟಕ್ಕೆ ತಲುಪಿದ್ದಾರೆ. ಆ ಮೂಲಕ ಫೆಡರರ್ ವಿರುದ್ಧ ಸೆಣಸಬೇಕೆಂಬ ಕನಸು ಕಂಡಿದ್ದ ಡೆನಿಸ್ ಶಪೊವೊಲೋವ್ ಅವರ ಕನಸು ನನಸಾಯಿತು.
ಮೊದಲ ಬಾರಿ ಕೆನಡಾ ಆಟಗಾರ ಫೆಡರರ್ ಅವರನ್ನು ಎದುರಿಸಿದ್ದರು ಅಲ್ಲದೇ, ಮುಂದಿನ ವಾರ ಬಿಡುಗಡೆಯಾಗಲಿರುವ ಶ್ರೇಯಾಂಕದಲ್ಲಿ ಅಗ್ರ 20ರೊಳಗೆ ಡೆನಿಸ್ ಶಪೊವೊಲೋವ್ ಕಾಣಿಸಿಕೊಳ್ಳುವುದನ್ನು ಕಣ್ತುಂಬಿಕೊಳ್ಳಲು ಅವರು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ನನ್ನ ಟೆನಿಸ್ ವೃತ್ತಿ ಜೀವನದ ಆರಂಭದಿಂದಲೂ ನನ್ನ ನೆಚ್ಚಿನ ಆಟಗಾರನ ವಿರುದ್ಧ ಆಡಲು ಕಾಯುತ್ತಿದ್ದೇನೆ. ಅದು ಇಂದು ಈಡೇರಿದೆ. ಇದರೊಂದಿಗೆ ಹಲವು ವರ್ಷಗಳಿಂದ ಕಂಡ ಕನಸು ನನಸಾಗಿದೆ.
ಸಾಧ್ಯವಾದಷ್ಟು ಖುಷಿಯಾಗಿ ಆಡುವತ್ತ ಗಮನಹರಿಸಿದ್ದೇನೆ. ಆದರೆ, ಅವರ ವಿರುದ್ಧ ಆಡಲು ಅವಕಾಶ ಸಿಕ್ಕಿರುವುದು ಅತ್ಯಂತ ಹೆಚ್ಚಿನ ಖುಷಿ ತಂದಿದೆ? ಎಂದು ಡೆನಿಸ್ ಶಪೊವೊಲೋವ್ ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ ನಡೆದ ಹಣಾಹಣಿಯಲ್ಲಿ ತೀವ್ರ ಪೈಪೋಟಿ ನೀಡಿದ ಶಪೊವೊಲೋವ್ ಅವರು 6-2,6-4 ರ ಅಂತರದಿಂದ ಸೋಲುಂಡಿದ್ದಾರೆ.ಇದರಿಂದಾಗಿ ಫೆಡರರ್ ಪೈನಲ್ ಕನಸು ನನಸಾಸಿಗೆ .ಮುಂದಿನ ಪಂದ್ಯದಲ್ಲಿ ಫೆಡರರ್ ಜಾನ್ ಇಸನರ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
