ಫ್ಯಾರಿಸ್:
ಏಳು ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಮೈಕೆಲ್ ಷೂಮೇಕರ್ ಅವರು ಸೆಲ್ ಥೆರಪಿ ಶಸ್ತ್ರಚಿಕಿತ್ಸೆಗಾಗಿ ಪ್ಯಾರಿಸ್ನ ಜಾರ್ಜಸ್-ಪಾಂಪಿಡೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಫ್ರೆಂಚ್ ದೈನಿಕ ಲೆ ಪ್ಯಾರಿಸಿಯನ್ ವರದಿ ಮಾಡಿದೆ. ಪ್ಯಾರಿಸ್ ಆಸ್ಪತ್ರೆಗಳ ಇಲಾಖೆಯನ್ನು ಸಂಪರ್ಕಿಸಿದಾಗ ವೈದ್ಯಕೀಯ ಗೌಪ್ಯತೆ ಕಾನೂನುಗಳನ್ನು ಉಲ್ಲೇಖಿಸಿ ಸುದ್ದಿಯನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ.
ಆದರೆ ಲೆ ಪ್ಯಾರಿಸಿಯನ್ ಪ್ರಕಾರ, 50 ವರ್ಷದ ಜರ್ಮನ್ ಶಸ್ತ್ರಚಿಕಿತ್ಸಕ ಫಿಲಿಪ್ ಮೆನಾಸ್ಚೆ ಅವರ ಮೇಲ್ವಿಚಾರಣೆಯ ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿ ಮೈಕಲ್ ಅವರು ಇದ್ದಾರೆ ಎಂದು ವರದಿಯಾಗಿದೆ ಸದ್ಯ ಅವರು ಇರುವ ಹಾಸ್ಪಿಟಲ್ ಅನ್ನು ‘ಹೃದಯಾಘಾತದ ವಿರುದ್ಧ ಕೋಶ ಶಸ್ತ್ರಚಿಕಿತ್ಸೆಯಲ್ಲಿ ಅಗ್ರಗಣ್ಯ’ ಎಂದು ಕರೆಯಲಾಗುತ್ತದೆ.
“ಚಿಕಿತ್ಸೆಯು ಮಂಗಳವಾರ ಬೆಳಿಗ್ಗೆ ಪ್ರಾರಂಭವಾಗಲಿದೆ ಮತ್ತು ಬುಧವಾರ ಅವರು ಹಾಸ್ಪಿಟಲ್ ನಿಂದ ಹೋಗುವವರಿದ್ದಾರೆ” ಎಂದು ಲೆ ಪ್ಯಾರಿಸಿಯನ್ ತಿಳಿಸಿದೆ , ಮಾಜಿ ಫೆರಾರಿ ತಾರೆ ಈಗಾಗಲೇ ಎರಡು ಬಾರಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ 2013 ರ ಡಿಸೆಂಬರ್‌ನಲ್ಲಿ ಸ್ಕೀಯಿಂಗ್ ಅಪಘಾತದಿಂದ ಮೈಕಲ್ ಅವರಿಗೆ ದೊಡ್ಡ ಹೊಡೆತ ಬಿದ್ದಿತ್ತು,ಆವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕವಾಗಿ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ ಎಂದು ಲೇ ಪ್ಯಾರಿಸಿಯನ್ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
