ವಾಷಿಂಗ್ಟನ್: 
ಅನಿವಾಸಿ ಅಮೆರಿಕನ್ನರಿಗೆ ಒಳ್ಳೆ ಸುದ್ಧಿ ಕೊಟ್ಟ ಟ್ರಂಪ್ ಹೆಚ್ -4 ವೀಸಾ ಹೊಂದಿರುವವರಿಗೆ ಕೆಲಸದ ಅವಕಾಶವನ್ನು ನೀಡಿ ಹೊರಡಿಸಿದ್ದ ಆದೇಶ ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಹೇಳಿದೆ.
ಹೋಮ್ ಲ್ಯಾಂಡ್ ಸೆಕ್ಯುರಿಟಿಸ್(ಡಿಎಚ್ ಎಸ್) ಇಲಾಖೆ ಇತ್ತೀಚೆಗೆ ಅಮೆರಿಕಾದ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ, ಹೆಚ್ -1ಬಿ ವಲಸೆರಹಿತ ವೀಸಾ ಹೊಂದಿರುವವರ ಪತ್ನಿಯರಿಗೆ ಹೆಚ್-4 ವೀಸಾ ಕಾನೂನುಬದ್ಧಗೊಳಿಸುವ ಪ್ರಕ್ರಿಯೆಗೆ ರದ್ಧತಿಯನ್ನು ತೆಗೆದುಹಾಕಲು ಪ್ರಯತ್ನವನ್ನು ತೀವ್ರಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಹೊಸ ಕಾನೂನನ್ನು ಮೂರು ತಿಂಗಳಲ್ಲಿ ಶ್ವೇತಭವನದ ಆಫೀಸ್ ಆಫ್ ಮ್ಯಾನೇಜ್ ಮೆಂಟ್ ಬಜೆಟ್ ಗೆ ಸಲ್ಲಿಸಲಾಗುವುದು ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿಸ್ ಇಲಾಖೆ ತಿಳಿಸಿದೆ.ಅಲ್ಲಿಯವರೆಗೆ ಸರ್ಕಾರದ ನಿರ್ಧಾರವನ್ನು ತಡೆಹಿಡಿಯಬೇಕು ಎಂದು ಕೂಡ ಡಿಎಚ್ಎಸ್ ನ್ಯಾಯಾಲಯವನ್ನು ಒತ್ತಾಯಿಸಿದೆ.
ಈ ಬಗ್ಗೆ ಅಮೇರಿಕಾದ ಸೇವ್ ಜಾಬ್ಸ್ ಆಕ್ಷೇಪ ಸಲ್ಲಿಸಿ, ಸರ್ಕಾರದ ಇಂತಹ ನಿರ್ಧಾರದಿಂದ ಇಲ್ಲಿನ ಸ್ಥಳೀಯ ಉದ್ಯೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಅಮೆರಿಕಾದ ನೌಕರರ ಪರವಾಗಿ ಅರ್ಜಿ ಸಲ್ಲಿಸಿತ್ತು. ಹೆಚ್-4 ವೀಸಾ ಸುಗ್ರೀವಾಜ್ಞೆ ಹೊರಡಿಸಿದ್ದು ಹಿಂದಿನ ಬರಾಕ್ ಒಬಾಮಾ ಸರ್ಕಾರ .
ಈ ಹಿಂದೆಯೇ ಟ್ರಂಪ್ ಸರ್ಕಾರ ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕವಾಗಿ ಹೆಚ್-4 ವೀಸಾ ಹೊಂದಿರುವವರಿಗೆ ಕೆಲಸಕ್ಕೆ ಅನುಮತಿ ನೀಡುವ ಆದೇಶವನ್ನು ಹಿಂತೆಗೆದುಕೊಳ್ಳಲು ಬಯಸುತ್ತದೆ ಎಂದು ಸಾರಿತ್ತು. ಹೆಚ್-4 ವೀಸಾ ಹೊಂದಿರುವವರಲ್ಲಿ ಬಹುತೇಕ ಮಂದಿ ಭಾರತೀಯ ಮೂಲದ ಅಮೆರಿಕನ್ನರು ಮತ್ತು ಮಹಿಳೆಯರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
