ಜನೀವಾ: 

ಈಗಿನ ಕಾಲದಲ್ಲಿ ಇಂಟರ್ನೆಟ್ ಸಂಪರ್ಕ ಸಾಧನವಲ್ಲದೇ ಅದು ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರೆ ಅತಿಷಯೋಕ್ತಿಯಲ್ಲ ಯಾಕೆಂದರೆ ನಮ್ಮ ಜಗತ್ತಿನಲ್ಲಿ ಯಾವುದೇ ಒಂದು ಸಣ್ಣ ವಿಷಯವೇ ಇರಲಿ ಅಥವಾ ಯಾವುದೇ ಗಹನವಾಗಿರುವಂತಹ ಸಂಗತಿಯಾದರು ಪರಿಹಾರವಾಗಿ ನಾವು ಕೇಳುವ ಒಂದೇ ಒಂದು ಪರಿಕರ ಅಥವಾ ಸಾಧನವೆಂದರೆ ಅದುವೇ ಅಂತರ್ಜಾಲ ಈ ಸೇವೆ ಇಲ್ಲದೇ ಇರುವ ಪ್ರದೇಶವಾಗಲಿ ಅಥವಾ ವ್ಯಕ್ತಿಗಳಾಗಲಿ ಸಿಗುವುದು ಕಷ್ಟಸಾಧ್ಯ. ಬಹುತೇಕ ಎಲ್ಲರೂ ಸಹ ಇಂಟರ್ ನೆಟ್ ನೊಂದಿಗೆ ಬೆಸೆದುಕೊಂಡಿರುತ್ತಾರೆ ಈ ಬೆಳವಣಿಗೆ ತೀವ್ರವಾಗಿದ್ದು ಈಗಾಗಲೇ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಇಂಟರ್ ನೆಟ್ ಬಳಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಂತರಾಷ್ಟ್ರೀಯ ಸಂಶೋಧನೆಯ ಮಾಹಿತಿಯ ಪ್ರಕಾರ 2018 ರ ಅಂತ್ಯಕ್ಕೆ ವಿಶ್ವದ ಒಟ್ಟಾರೆ ಜನಸಂಖ್ಯೆ ಪೈಕಿ 3.9 ಬಿಲಿಯನ್ ಜನರು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ. ಅಂದರೆ ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇ.51.2 ರಷ್ಟು ಮಂದಿ ಆನ್ ಲೈನ್ ನಲ್ಲಿರುತ್ತಾರೆ! ಎಂಬುದು ಆತಂಕಕಾರಿಯಾಗಿದೆ ಎಂದು ತಿಳಿಸಲಾಗಿದೆ
ಬರುವ ವರ್ಷಗಳಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಮಾನವ ಸಹಜ ಸಂಬಂಧಗಳಿಗೆ ಕುತ್ತು ಬರಬಹುದು ಎಂದು ವಿಶ್ವ ಸಂಸ್ಥೆ ಅಭಿಪ್ರಾಯ ಪಟ್ಟಿದೆ ಎಂದು ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








