ಶಾಲಾ ಗ್ರಂಥಾಲಯಗಳಿಂದ ಹ್ಯಾರಿ ಪಾಟರ್ ಔಟ್ ..!

ಅಮೇರಿಕ :

     ಅಮೇರಿಕದ ಕ್ಯಾಥೊಲಿಕ್ ಶಾಲೆಯು ಹ್ಯಾರಿ ಪಾಟರ್ ಪುಸ್ತಕಗಳನ್ನು ಗ್ರಂಥಾಲಯದಿಂದ ತೆಗೆದುಹಾಕಲಾಗಿದೆ ಎಂದು ಶಾಲೆಯ ಪಾದ್ರಿ ತಿಳಿಸಿದ್ದಾರೆ ಇದಕ್ಕೆ ಅವರು ನೀಡುವ ಕಾರಣ ೀ ಪುಸ್ತಕಗಳು ಓದುಗರ ಚಿಂತನೆಗಳನ್ನು ದುಷ್ಟ ಮಾರ್ಗಗಳಿಗೆ ಕಡೆ ಸೆಳೆಯುವಂತತಹವಾಗಿವೆ  ಆದ್ದರಿಂದ ಿವುಗಳನ್ನು ಶಾಲೆಯ ಗ್ರಂಥಾಲಯದಿಂದ ತೆಗೆಯಲಾಗಿದೆ ಎಂದಿದ್ದಾರೆ.

   ಅಮೇರಿಕದ ನ್ಯಾಶ್ವಿಲ್ಲೆಯ ಸೇಂಟ್ ಎಡ್ವರ್ಡ್ ಕ್ಯಾಥೊಲಿಕ್ ಶಾಲೆಯ ಅಮೇರಿಕ ಮತ್ತು ರೋಮ್ ನ ತಜ್ಞರನನ್ನು ಸಂಪರ್ಕಿಸಿದ ನಂತರವೇ ಪುಸ್ತಕಗಳನ್ನು ತೆಗೆದುಹಾಕಲು ಶಿಫಾರಸು ಮಾಡಿದ್ದಾಗಿ ಹೇಳಿದರು.

   ಅವರು ಹೇಳುವ ಪ್ರಕಾರ “ಪುಸ್ತಕದಲ್ಲಿ  ಬಳಸಲಾಗಿರುವ ಶಾಪಗಳು ಮತ್ತು ಮಂತ್ರಗಳನ್ನು ಓದಿದಾಗ ಅವು ನಿಜವಾದವುಗಳೇನೋ ಎಂಬಂತೆ ಭಾಸವಾಗುತ್ತವೆ ಇದರಿಂದಾಗಿ ಮನುಷ್ಯನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ . ”

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ