ಜಕಾರ್ತಾ
ಇಂಡೋನೇಷ್ಯಾದ ಪಶ್ಚಿಮ ಭಾಗದ ಪೂರ್ವ ಜಾವಾ ಪ್ರಾಂತ್ಯದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸುನಾಮಿ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.
ಭೂಕಂಪದ ತೀವ್ರತೆ 5.6 ಎಂದು ಮೊದಲು ವರದಿಯಾಗಿತ್ತು. ಕೆಲ ನಿಮಿಷಗಳ ನಂತರ ಇದು 6.1 ತೀವ್ರತೆಯ ಭೂಕಂಪವೆಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ಸಂಸ್ಥೆಯ ಅಧಿಕೃತ ಉಸ್ತುವಾರಿ ಅಲ್ಫಾತ್ ಅಬೂಬಕರ್ ದೂರವಾಣಿ ಮೂಲಕ ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆ 6 ನಿಮಿಷಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಈ ಪ್ರಾಂತ್ಯದಿಂದ ಸಮುದ್ರದಲ್ಲಿ 56 ಕಿ.ಮೀ ದಿಕ್ಕಿನಲ್ಲಿ 656 ಕಿ.ಮೀ ಆಳದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಕೆಲ ನಿಮಿಷಗಳ ನಂತರ, ಸಮುದ್ರ ತಳದಲ್ಲಿ 623 ಕಿ.ಮೀ ಆಳದಲ್ಲಿ 6ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.ಎರಡನೇ ಭೂಕಂಪದ ಸ್ಥಿತಿಯ ಬಗ್ಗೆ ವಿಶ್ಲೇಷಣೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. “ಪೆಸಿಫಿಕ್ ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುವ ಭೂಕಂಪ ಪ್ರಭಾವಿತ ಪ್ರದೇಶದ ಮೇಲೆ ಇಂಡೋನೇಷ್ಯಾ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ