ಇಸ್ಲಾಮಾಬಾದ್:
ಜಗತ್ತಿನಾದ್ಯಂತ ಕೊರೋನಾ ವೈರಸ್ ನಿಂದಾಗಿ ವಿಶ್ವಾದ್ಯಂತ ಆರ್ಥಿಕತೆ ಸ್ಥಗಿತಗೊಂಡಿದ್ದು, ಪಾಕಿಸ್ತಾನದಲ್ಲಿ ಜನ ಕೊರೋನಾ ವೈರಸ್ ಗಿಂತ ಹೆಚ್ಚಾಗಿ ಹಸಿವಿನಿಂದ ಸಾಯುವಂತಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಇಮ್ರಾನ್ ಖಾನ್ ಅವರು, ‘ಕೊರೊನಾ ವೈರಸ್ನಿಂದಾಗಿ ವಿಶ್ವದಾದ್ಯಂತದ ಆರ್ಥಿಕತೆಯು ಸ್ಥಗಿತಗೊಂಡಿದೆ. ಒಂದು ಕಡೆ ಕೊರೊನಾವೈರಸ್ ವಿರುದ್ಧ ಹೋರಾಡುವ ಸವಾಲುಗಳು ಎದುರಾಗಿದ್ದರೆ, ಇನ್ನೊಂದು ಕಡೆ ಆರ್ಥಿಕತೆಯನ್ನು ನಿರ್ವಹಿಸುವುದು ಕಠಿಣವಾಗಿದೆ. ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಜನರು ಹಸಿವಿನಿಂದ ಸಾಯುತ್ತಿದ್ದಾರೆ. ದಯವಿಟ್ಟು ಜನರ ಹಸಿವೆ ನೀಗಿಸಲು ಸಹಾಯ ಮಾಡಿ. ಸಾಲದ ರೂಪದಲ್ಲಿ ಪರಿಹಾರ ನೀಡಿ ಎಂದು ವಿಶ್ವ ಸಮುದಾಯದ ಮುಂದೆ ಮಂಡಿಯೂರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/03-15.gif)