ಭಾರತ WTO ನಿಯಮಗಳನ್ನು ಉಲ್ಲಂಘಿಸಿದೆ :ಚೀನಾ

ಬೀಜಿಂಗ್:

     ನೆರೆ ರಾಷ್ಟ್ರ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವ ಭಾರತದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಚೀನಾ ಈ ನಿಷೇಧದಿಂದ ಭಾರತದ “ತಾರತಮ್ಯ” ಧೋರಣೆ ಜಗಜಾಹಿರವಾಗಿದೆ ಎಂದಿದೆ.

    “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಭಾರತದ ರಕ್ಷಣೆ, ರಾಷ್ಟ್ರದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ” ಯ ಹಾನಿಗೆ ಯತ್ನಿಸಿದ್ದಕ್ಕಾಗಿ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸೋಮವಾರ ನಿಷೇಧಿಸಿದೆ. ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯದೊಂದಿಗೆ ಗಡಿಯಲ್ಲಿ ನಡೆದ ಸಂಘ್ರಷದ ಬಳಿಕ ಈ ನಿಷೇಧ ಜಾರಿಯಾಗಿದೆ.”

     ಮೊದಲನೆಯದಾಗಿ, ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳ ವಿರುದ್ಧ ಚೀನಾ ಯಾವುದೇ ನಿರ್ಬಂಧಿತ ಮತ್ತು ತಾರತಮ್ಯದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಚೀನಾ ಹೇಳಿದೆ.”ಭಾರತದ ಈ ನಿರ್ಧಾರ ಸಂಬಂಧಿತ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ” ಎಂದು ನೆರೆರಾಷ್ಟ್ರ ತನ್ನ ಹೇಳಿಕೆಯಲ್ಲಿ ವಿವರಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap