ವಾಷಿಂಗ್ಟನ್: 
ನ್ಯೂ ಮೆಕ್ಸಿಕೋದಲ್ಲಿನ ಭಾರತೀಯ ಮೂಲದವರ ರೆಸ್ಟೋರೆಂಟ್ವೊಂದನ್ನು ಧ್ವಂಸ ಮಾಡಲಾಗಿದ್ದು ಅದರ ಅವಶೇಷಗಳ ಮೇಲೆ ದ್ವೇಷ ಸಾರುವ ಸಂದೇಶಗಳನ್ನು ಬರೆಯಲಾಗಿದೆ.ಸೇಂಟ್ ಫೆ ಸಿಟಿಯಲ್ಲಿರುವ ಇಂಡಿಯಾ ಪ್ಯಾಲೇಸ್ ಎಂಬ ರೆಸ್ಟೋರೆಂಟ್ನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ಇದರಿಂದ ಮಾಲೀಕರಿಗೆ ಸುಮಾರು 1,00,000 ಡಾಲರ್ಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ರೆಸ್ಟೋರೆಂಟ್ ಧ್ವಂಸ ಮಾಡಿದ ದುಷ್ಕರ್ಮಿಕಗಳ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ಎಎಲ್ಡಿಇಎಪ್ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ. ತಮ್ಮ ರೆಸ್ಟೋರೆಂಟ್ನಲ್ಲಿ ಏನು ನಡೆಯಿತು ಎಂಬುದನ್ನು ಅದರ ಮಾಲೀಕ ಬಲ್ಜಿತ್ ಸಿಂಗ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಿಖ್ ಅಮೆರಿಕನ್ ಆಗಿರುವ ಲಖ್ವಂತ್ ಸಿಂಗ್ ಎಂಬುವರ ಮೇಲೆ ತೀವ್ರ ಹಲ್ಲೆಯಾಗಿತ್ತು. ಎರಿಕ್ ಬ್ರೀಮಾನ್ ಎಂಬಾತ ಅವರಿಗೆ ಥಳಿಸಿದ್ದ. ನೀನು ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ನಿಂದಿಸಿದ್ದ ಎಂಬುದಾಗಿ ಎಸ್ಎಎಲ್ಡಿಇಎಫ್ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








