ಭೂಕಂಪ 400 ಮಂದಿ ದುರ್ಮರಣ !

ಸುಲಾವೇಸಿ:
       ನಮ್ಮ ದೇಶದ ನೆರೆಯ ದ್ವೀಪ ಸುಲಾವೇಸಿಯ ಪಲು ನಗರದಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಸುಮಾರು 400 ಮಂದಿ ಸಾವನ್ನಪ್ಪಿರಬಹುದು ಎಂದು ವರದಿಯಾಗಿದೆ. ಸುಲಾವೆಸಿ ದ್ವೀಪದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್​​ಮಾಪನದಲ್ಲಿ 7.5 ತೀವ್ರತೆ ದಾಖಲಾಗಿದೆ.
        ಸಮುದ್ರ ನೀರು ದ್ವೀಪವನ್ನು ಆವರಿಸಿದ್ದು, ಸುನಾಮಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 400 ಸಾವು ಸಂಭವಿಸಿರುವುದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.ಜನನಿಬಿಡ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ಇನ್ನು ಭೂಕಂಪನ ವೇಳೆ ಸಮುದ್ರ ಅಲೆಗಳು 5 ಅಡಿಗಳಷ್ಟು ಎತ್ತರದವರೆಗೂ ಅಪ್ಪಳಿಸಿವೆ.ಸುಲಾವೆಸಿ ದ್ವೀಪದಲ್ಲಿ ಮೂರುವರೆ ಲಕ್ಷ ಜನ ನೆಲೆಸಿದ್ದಾರೆ. ಬೀಚ್​ಫೆಸ್ಟಿವಲ್​​ಸಂಭ್ರಮದಲ್ಲಿದ್ದ ನಾಗರಿಕರು ಸಾವಿನ ಮನೆ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap