ಅಮೆರಿಕದ ಮೇಲೆ ಸೈಬರ್ ದಾಳಿ ಶುರು ಮಾಡಿದೆಯೇ ಇರಾನ್…?

ವಾಷಿಂಗ್ಟನ್:

    ಇರಾನ್ ಮೇಲೆ ದಾಳಿ ಮಾಡಿ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಇರಾನ್ ನೇರವಾಗಿ ಅಮೇರಿಕಾದ ನರಮಂಡಲವಾದ ಅಂತರ್ಜಾಲವನ್ನು ಕೆದಕಿ ಘಾಸಿಗೊಳಿಸುವ ಕೆಲಸಕ್ಕೆ ಇರಾನ್ ಕೈ ಹಾಕಿದೆಯೇ ಎಂಬ ಅನುಮಾದಿಂದ ಅಮೇರಿಕ ಅಕ್ಷರಶಹ ತತ್ತರಿಸಿದೆ.

   ಇರಾನ್ ಸದ್ಯ  ಅಮೆರಿಕದ ಮೇಲೆ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದ ವೆಬ್ ಸೈಟ್ ವೊಂದನ್ನು ಇರಾನ್ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ. 

    ಫೆಡರಲ್ ಡಿಪಾಸಿಟರಿ ಲೈಬ್ರರಿ ಪ್ರೋಗ್ರಾಮ್ ಎಂಬ ವೆಬ್ ಸೈಟ್ ಅನ್ನು ಶನಿವಾರ ಹ್ಯಾಕ್ ಮಾಡಲಾಗಿದೆ. ದೇವರ ಹೆಸರಿನಲ್ಲಿ ಇರಾನ್ ಸೈಬರ್ ಸೆಕ್ಯುರಿಟಿ ಗ್ರೂಪ್ ಹ್ಯಾಕರ್ ಸಂಸ್ಥೆ ಈ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದೆ. ಇದು ಇರಾನ್ ಸೈಬರ್ ಸಾಮರ್ಥ್ಯದ ಸಣ್ಣ ಭಾಗ. ನಾವು ಯಾವಾಗಲು ಯಾವ ಸವಾಲಿಗಾದರು ಸಿದ್ಧವಾಗಿದ್ದೇವೆಂಬ ಸಾಲಗಳುನ್ನು ಬರೆಯಲಾಗಿದೆ. 

    ಅಮೆರಿಕದ ಜನರಿಗೆ ಉಚಿತವಾಗಿ ಸರ್ಕಾರಿ ಪ್ರಕಾಶನಗಳನ್ನು ಒದಗಿಸುವ ಉದ್ದೇಶದಿಂದ ಎಫ್’ಡಿ ಎಫ್ ಪಿಯನ್ನು ಸೃಷ್ಟಿಸಲಾಗಿತ್ತು ಈಗ ಅದೇ ವೆಬ್ ಸೈಟ್ ನ್ನು ಹ್ಯಾಕ್ ಮಾಡುವ ಮೂಲಕ ಇರಾನ್ ಸೈಬರ್ ದಾಳಿ ಆರಂಭಿಸಿರಬಹುದು ಎಂದು ಭದ್ರತಾ ತಜ್ಞರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap