ಇಂಗ್ಲೆಂಡ್‌ ವಿರುದ್ಧ ಇರಾನ್‌ ಕಿಡಿ..!!

ಮಾಸ್ಕೋ

   ಅಮೆರಿಕ ಮತ್ತು ಪ್ರಾದೇಶಿಕ ಪಡೆಗಳ ಸಹಾಯದಿಂದ ಯುದ್ಧಕ್ಕೆ ಎಳೆಯಲು ಯತ್ನಿಸುತ್ತಿರುವ ಇಂಗ್ಲೆಂಡ್‌ ವಿರುದ್ಧ ಇರಾನಿನ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಮತ್ತು ಅವರ ಇಸ್ರೇಲಿ, ಸೌದಿ ಮತ್ತು ಎಮಿರೈಟ್‌ ಮಿತ್ರರಾಷ್ಟ್ರಗಳು ಇಸ್ಲಾಮಿಕ್ ಗಣರಾಜ್ಯದ ಮೇಲೆ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನವರಿಕೆ ಮಾಡಲು ವಿಫಲವಾದ ನಂತರ, ಇರಾನ್ ಜೊತೆಗಿನ ಮಿಲಿಟರಿ ಘರ್ಷಣೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

      ಶತಮಾನದ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್‌ರನ್ನು ಮನವೊಲಿಸಲು ವಿಫಲರಾಗಿದ್ದರಿಂದ ಮತ್ತು ಅವರ ಬಿ-ಟೀಮ್‌ ಗೆ ಹಿನ್ನಡೆ ಯಾಗುವ ಭಯದಿಂದ, ಜಾನ್ ಬೋಲ್ಟನ್ ಈಗ ಮತ್ತೊಂದು ಯತ್ನ ಮಾಡುತ್ತಿದ್ದಾರೆ. ವಿವೇಕ ಮತ್ತು ದೂರದೃಷ್ಟಿಯಿಂದ ಮಾತ್ರ ಇಂತಹ ತಂತ್ರಗಳನ್ನು ತಡೆಯಬಹುದು ಎಂದು ಜರೀಫ್ ಟ್ವೀಟ್ ಮಾಡಿದ್ದಾರೆ .ಜುಲೈ 4 ರಂದು ಜಿಬ್ರಾಲ್ಟರ್‌ನಿಂದ ಸಿರಿಯಾಕ್ಕೆ ಶಂಕಿತ ತೈಲ ಸರಕಿನೊಂದಿಗೆ ಇರಾನಿನ ಟ್ಯಾಂಕರ್ ಅನ್ನು ವಶಪಡಿಸಿಕೊಳ್ಳಲು ಇಂಗ್ಲೆಂಡ್‌ ಹಡಗುಗಳು ಸಹಾಯ ಮಾಡಿದ ನಂತರ ಇರಾನ್ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಸಂಬಂಧ ಹಳಸಿದೆ ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap