ಇರಾಕ್: ಐಎಸ್ ಸಂಘಟನೆಯ ಪ್ರಮುಖ ನಾಯಕ ಸಾವು

ಬಾಗ್ದಾದ್

        ಇರಾಕ್ ನ ಪಶ್ಚಿಮ ಪ್ರಾಂತ್ಯದ ಅನ್ಬರ್ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆಯ ಪ್ರಮುಖ ನಾಯಕ ಮೃತಪಟ್ಟಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.

       ಕೊಲ್ಲಲ್ಪಟ್ಟ ಐಎಸ್ ಸಂಘಟನೆಯ ನಾಯಕನನ್ನು ಸುಲೈಮಾನ್ ಅಹ್ಮದ್ ಮುದ್ದೇನ್ ಎಂದು ಗುರುತಿಸಲಾಗಿದೆ. ಪ್ರಶ‍್ಚಿಮ ಪ್ರಾಂತ್ಯದ ರಾಜಧಾನಿ ರಾಮಡಿಯ ನೈರುತ್ಯದಲ್ಲಿರುವ ಅಲ್-ರಝಝಾ ಸರೋವರದ ಹತ್ತಿರದ ಮರುಭೂಮಿ ಪ್ರದೇಶದಲ್ಲಿ ಅನ್ಬರ್ ಭದ್ರತಾ ಪಡೆ ಮತ್ತು ಪ್ರಾಂತೀಯ ಪೊಲೀಸ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮುದ್ದೇನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥ ಹದಿ ಎರ್ಝಿಜ್ ಹೇಳಿದ್ದಾರೆ.

     “ಭಯೋತ್ಪಾದಕ, ಅನ್ಬರ್ ಪ್ರಾಂತ್ಯದ ಐಎಸ್ ಗುಂಪಿನ ಆಡಳಿತಾತ್ಮಕ ನಾಯಕನಾಗಿದ್ದು, ಕಳೆದ ಹಲವು ವರ್ಷಗಳಲ್ಲಿ ನಡೆದ ಭಯೋತ್ಪಾದನಾ ದಾಳಿಯ ರೂವಾರಿಯಾಗಿದ್ದ ಎಂದು ಎರ್ಝೀಜ್ ತಿಳಿಸಿದರು.ನೆರೆಯ ಸಿರಿಯಾ, ಜೋರ್ಡಾನ್ ಹಾಗೂ ಸೌದಿ ಅರೆಬಿಯಾ ರಾಷ್ಟ್ರಗಳಿಗೆ ಹೊಂದಿಕೊಂಡಿರುವ ಅನ್ಬರ್ ಮರುಭೂಮಿ ಪ್ರದೇಶದಲ್ಲಿ ಐಎಸ್ ಉಗ್ರಗಾಮಿಗಳು ಇನ್ನೂ ಸಕ್ರಿಯವಾಗಿದ್ದು, ಇತ್ತೀಚಿಗಷ್ಟೇ ಹಲವು ನಾಗರಿಕರನ್ನು ಅಪಹರಿಸಿ ಸಾಯಿಸಿದ್ದರು.

      2017ರ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಐಎಸ್ ವಿರೋಧಿ ಒಕ್ಕೂಟ ಬೆಂಬಲಿತ ಭದ್ರತಾ ಪಡೆ ಹಾಗೂ ಹಶ್ದ್ ಶಾಬಿ ಅರೆ ಸೈನಿಕ ಘಟಕಗಳು ಉಗ್ರರ ಹಿಡಿತದಲ್ಲಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಐಎಸ್ ಮುಕ್ತ ದೇಶ ಎಂದು ಇರಾಕ್ ಘೋಷಿಸಿತ್ತು.ಆದರೆ, ಕೆಲ ಉಗ್ರರು ನಗರ ಹಾಗೂ ಮರುಭೂಮಿ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು, ನಾಗರಿಕರು ಹಾಗೂ ಸೇನಾ ಪಡೆ ಮೇಲೆ ಗೆರಿಲ್ಲಾ ದಾಳಿ ನಡೆಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link