ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆಗೆ ಸಜ್ಜಾದ ಇಸ್ರೇಲ್..!!

ಜೆರುಸಲೆಂ:
    ಕೆಲ ದಿನಗಳ ಹಿಂದೆಯಷ್ಟೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇಸ್ರೇಲ್ ಅಧ್ಯಕ್ಷೀಯ ಚುಕ್ಕಾಣಿ ಹಿಡಿಯಲು ಮುಂದಾಗಿದ್ದ ಮೋದಿ ಆಪ್ತ ಬೆಂಜಮಿನ್ ನೇತನ್ಯಾಹು ಬಹುಮತ ಸಾಭೀತು ಪಡಿಸಲು ನೀಡಿದ್ದ ಗಡುವು ಮುಗಿದರೂ ನೆತನ್ಯಾಹು ಬಹುಮತ ಸಾಭೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆ ಹೋಗಬೇಕಾಗಿ ಬಂದಿದೆ.
    ಕಳೆದ ತಿಂಗಳಷ್ಟೇ ನೆತನ್ಯಾಹು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ,ಅಲ್ಲಿನ ಸಂಸತು ಸರ್ಕಾರ ವಿಸರ್ಜನೆ ಪರ ಮತ ಹಾಕಿದ್ದರಿಂದ ಇಸ್ರೇಲ್‍ನಲ್ಲಿ ಕೇವಲ ಒಂದು ವರ್ಷದಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ. 
    ಸಂಸತ್‍ನಲ್ಲಿ 12 ತಾಸು ನಡೆದ ಚರ್ಚೆಯಲ್ಲಿ 74 ಸಂಸದರು ಸರ್ಕಾರ ವಿಸರ್ಜನೆ ಪರ ಮತ ಹಾಕಿದರೆ, ಇದಕ್ಕೆ ವಿರುದ್ಧವಾಗಿ 45 ಸದಸ್ಯರು ಮತ ಹಾಕಿದ್ದಾರೆ.ಇದರೊಂದಿಗೆ 21ನೇ ಇಸ್ರೇಲ್‍ ಸಂಸತ್‍ (ಕೆನೆಸೆಟ್‍) ವಿಸರ್ಜನೆಗೊಳ್ಳಲಿದೆ. ಹೊಸ ಚುನಾವಣೆ ಮುಂದಿನ ಸೆ.17ರಂದು ನಡೆಯಲಿದೆ ಎಂದು ಟೈಮ್ಸ್ ಆಫ್‍ ಇಸ್ರೇಲ್‍ ಪತ್ರಿಕೆ ವರದಿ ಮಾಡಿದೆ. 
     ಮೈತ್ರಿಕೂಟ ಸದೃಢವಾಗಿದ್ದರೆ ನೆತನ್‍ಯಾಹು ಸತತ ನಾಲ್ಕನೇ ಬಾರಿಗೆ ಪ್ರಧಾನಮಂತ್ರಿಯಾಗುತ್ತಿದ್ದರು. ಏ.9ರಂದು ನಡೆದ ಚುನಾವಣೆಯಲ್ಲಿ ಅವರ ಲಿಕುಡ್‍ ಪಕ್ಷ ಉತ್ತಮ ಸಾಧನೆ ತೋರಿದರೂ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿರಲಿಲ್ಲ. ಇದರಿಂದ ಮೈತ್ರಿಪಕ್ಷಗಳ ಮೊರೆ ಹೋಗಬೇಕಾಗಿ ಬಮದಿತ್ತು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap