ಜಪಾನ್ ನಲ್ಲಿ ಸುನಾಮಿ ಮುನ್ಸೂಚನೆ..!!

ಟೋಕಿಯೊ

      ಜಪಾನ್ ನ ಯಮಾಗಾಟ ಪ್ರಾಂತ್ಯದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ. ನಿನ್ನೆ ಸುಮಾರು 10.22ಕ್ಕೆ ಭೂಮಿ ಕಂಪಿಸಿದ್ದು, ಉತ್ತರಕ್ಕೆ 38.6 ಡಿಗ್ರಿ ಅಕ್ಷಾಂಶ ಮತ್ತು ಪೂರ್ವಕ್ಕೆ 139.5 ಡಿಗ್ರಿ ರೇಖಾಂಶದಲ್ಲಿ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ಕಂಡುಬಂದಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ವಾಯುವ್ಯ ಜಪಾನ್ ನಲ್ಲಿ ಭೂಮಿ ಕಂಪಿಸಿದ್ದು, ಸುನಾಮಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಮುಂಜಾಗ್ರತೆ ಕ್ರಮವಾಗಿ ಈ ಬಾಗದ ಬುಲೆಟ್ ರೈಲು ಸೇವೆಗಳು ಸ್ಥಗಿತವಾಗಿದೆ. ಇದೀಗ ಆ ಭಾಗದಲ್ಲಿನ ಇನ್ನೂರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಆದರೆ ಇದುವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link