ಅನಿಲ್ ಅಂಬಾನಿಗೆ ಶಾಕ್ ನೀಡಿದ ಲಂಡನ್ ಕೋರ್ಟ್..!

ಲಂಡನ್:

    ಅಂಬಾನಿ ಸಮೂಹದ ಸಹೋದರರಲ್ಲಿ ಒಬ್ಬರಾದ ಅನಿಲ್ ಅಂಬಾನಿಗೆ ಲಂಡನ್ ಕೋರ್ಟ್ ಇಂದು ದೊಡ್ಡ ಶಾಕ್ ಒಂದನ್ನು ನೀಡಿದೆ  ಸಾಲ ಒಪ್ಪಂದಕ್ಕೆ ಸಂಬಂಧಿಸಿದಂತೆ  21 ದಿನಗಳೊಳಗೆ ಚೀನಾದ ಮೂರು ಬ್ಯಾಂಕುಗಳಿಗೆ ಸುಮಾರು 717 ಮಿಲಿಯನ್ ಡಾಲರ್ ನೀಡುವಂತೆ ಲಂಡನ್ ನ ಕೋರ್ಟ್ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಆದೇಶ ನೀಡಿದೆ.

     ಕೋವಿಡ್-19 ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಯುಕೆ ಹೈಕೋರ್ಟ್ ಮತ್ತು ಲಂಡನ್ ವೇಲ್ಸ್ ನಲ್ಲಿ ಆದೇಶ ನೀಡಿದ ನ್ಯಾಯಾಧೀಶ ನಿಗೆಲ್ ಟೀರ್, ಪ್ರತಿವಾದಿಯ ಮೇಲೆ ಖಾತರಿ ಆರೋಪಕ್ಕೆ ಸಂಬಂಧಪಟ್ಟದ್ದಾಗಿದ್ದು ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ ಅನಿಲ್ ಅಂಬಾನಿ ಚೀನಾದ ಬ್ಯಾಂಕಿಗೆ ಮೊತ್ತವನ್ನು ಭರಿಸಬೇಕು ಎಂದು ತೀರ್ಪು ನೀಡಿದರು.

    2012 ರಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಮ್) ಪಡೆದ ಕಾರ್ಪೊರೇಟ್ ಸಾಲಕ್ಕೆ ವೈಯಕ್ತಿಕ ಖಾತರಿಯ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಇದು ಅನಿಲ್ ಅಂಬಾನಿಯವರು ಪಡೆದ ವೈಯಕ್ತಿಕ ಸಾಲವಲ್ಲ. ಚೀನಾದ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಸಾಲದ ಮೇಲೆ ಖಾತರಿ ಹಾಕಿದ ಆರೋಪ ಮಾಡುತ್ತಿದ್ದು ಅದನ್ನು ಅನಿಲ್ ಅಂಬಾನಿಯವರು ನಿರಾಕರಿಸುತ್ತಲೇ ಬಂದಿದ್ದಾರೆ. ಅಂಬಾನಿಯವರು ತಮ್ಮ ಪರವಾಗಿ ಯಾರಿಗೂ ಸಾಲ ಪಡೆಯುವಾಗ ಖಾತರಿ ಹಾಕಿರಲಿಲ್ಲ ಎಂದು ಅನಿಲ್ ಅಂಬಾನಿ ವಕ್ತಾರರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap