ಫ್ಲೈ ದುಬೈ ವಿಮಾನದಲ್ಲಿ ಮ್ಯಾಕ್ ಬುಕ್ ಪ್ರೋ ಲ್ಯಾಪ್ ಟಾಪ್ ನಿಷೇಧ.!

ದುಬೈ

       ಸಂಯುಕ್ತ ಅರಬ್ ರಾಷ್ಟ್ರಗಳ ಮೂಲದ ಫ್ಲೈ ದುಬೈ ವಿಮಾನ , ಪ್ರಯಾಣಿಕರು ತಮ್ಮ ಹ್ಯಾಂಡ್ ಬ್ಯಾಗ್ ಇಲ್ಲವೇ ಲಗೇಜ್ ನಲ್ಲಿ 15 ಇಂಚಿನ ಮ್ಯಾಕ್ ಬುಕ್  ಪ್ರೋ ಲ್ಯಾಪ್ ಟಾಪ್ ಕೊಂಡೊಯ್ಯುವುದನ್ನು ನಿಷೇಧಿಸಿದೆ.

      ಇದರಿಂದ ಈ ಸಂಸ್ಥೆ, ಈಗಾಗಲೇ ಈ ಲ್ಯಾಪ್ ಟಾಪ್ ಅನ್ನು ನಿಷೇಧಿಸಿರುವ ಇತರ ವಿಮಾನಯಾನ ಸಂಸ್ಥೆಗಳ ಪಟ್ಟಿಗೆ ಸೇರಿದಂತಾಗಿದೆ. ಕಳೆದ ಜೂನ್ ನಲ್ಲಿ ಆ?ಯಪಲ್ ಸಂಸ್ಥೆ, 15 ಇಂಚಿನ ಮ್ಯಾಕ್ ಬುಕ್  ಪ್ರೋ ಲ್ಯಾಪ್ ಟಾಪ್ ಗಳು ಅತಿಯಾಗಿ ಬಿಸಿಯಾಗುತ್ತಿದ್ದು, ಅದರ ಬಳಕೆ ಸುರಕ್ಷಿತವಲ್ಲ ಎಂದು ಘೋಷಿಸಿತ್ತು. ಇದರ ಬೆನ್ನಲ್ಲೇ ಆ. 18ರಂದು ಇತಿಹಾದ್ ವಿಮಾನಯಾನ ಸಂಸ್ಥೆ ಅದನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ಎಮಿರೇಟ್ಸ್ ಹಾಗೂ ಫ್ಲೈ ದುಬೈ ಸಂಸ್ಥೆಗಳನ್ನು ನಿಷೇಧದ ಆದೇಶ ಹೊರಡಿಸಿವೆ.

      15 ಇಂಚಿನ ಮ್ಯಾಕ್ ಬುಕ್  ಪ್ರೋ ಮಾಡೆಲ್ ಗಳ ಉತ್ಪಾದನಾ ಸಂಸ್ಥೆ ಅದನ್ನು ಮಾರುಕಟ್ಟೆಯಿಂದ ಹಿಂಪಡೆದಿರುವ ಬೆನ್ನಲ್ಲಿ ಅವುಗಳನ್ನು ವಿಮಾನದಲ್ಲಿ ಸಾಗಿಸಲು ಅವಕಾಶ ನೀಡಲಾಗದು ಎಂದು ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಲ್ಯಾಪ್ ಟಾಪ್ ಗಳನ್ನು 2015ರಿಂದ 2017ರ ಫೆಬ್ರವರಿಯವರೆಗೆ ಮಾರಾಟ ಮಾಡಲಾಗಿತ್ತು. ಈಗಾಗಲೇ ಓಮನ್, ವರ್ಜಿನ್, ಸಿಂಗಾಪುರ, ಥಾಯ್ ವಿಮಾನಸಂಸ್ಥೆಗಳು ಕೂಡ ಈ ಉತ್ಪನ್ನವನ್ನು ನಿಷೇಧಿಸಿವೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap