ಕೌಲಾಲಂಪುರ
ಮಲೇಷಿಯಾದಿಂದ ಪ್ರಮುಖವಾಗಿ ರಪ್ತಾಗುವ ವಸ್ತುವೆಂದರೆ ಅದುವೆ ತಾಳೆ ಎಣ್ಣೆ ಇದನ್ನು ಖರೀದಿ ನಿಲ್ಲಿಸಬೇಡಿ ಎಂದು ಮಲೇಶಿಯಾ ಸರ್ಕಾರ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ .
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಪರಿಣಾಮವಾಗಿ ತಾಳೆ ಎಣ್ಣೆ ರಪ್ತಿನ ಮೇಲೆ ತೀವ್ರ ಪರಿಣಾಮ ಬೀರಿದ್ದು ಇದರಿಂದಾಗಿ ತಾಳೆ ಎಣ್ಣೆ ರಪ್ತು ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ ನಾವು ತಾಳೆ ಎಣ್ಣೆ ರಫ್ತಿಗೆ ಸಿದ್ಧರಿದ್ದೇವೆ, ಕೇವಲ ಭಾರತದೊಂದಿಗೆ ಮಾತ್ರವಲ್ಲ ಬೇರೆ ದೇಶಗಳಿಗೂ ಎಣ್ಣೆಯನ್ನು ರಫ್ತು ಮಾಡುತ್ತೇವೆ, ಕೊಂಡುಕೊಳ್ಳಿ ಎಂದು ಸಚಿವ ಡೇರೆಲ್ ಮನಿವ ಮಾಡಿಕೊಂಡಿದ್ದಾರೆ.
ಮುಂಬೈನಲ್ಲಿರುವಂತಹ ವೆಜಿಟೇಬಲ್ ಆಯಿಲ್ ಟ್ರೇಡ್ ಬಾಡಿಯು ಮಲೇಶಿಯಾದ ತಾಳೆ ಎಣ್ಣೆಯನ್ನು ಖರೀದಿಸದಂತೆ ಸೋಮವಾರ ನಿರ್ಧಾರ ಕೈಗೊಂಡಿತ್ತು. ಭಾರತದ ಈ ನಿರ್ಧಾರದಿಂದಾಗಿ ಬೇರೆ ದೇಶಗಳು ಕೂಡ ಮಲೇಶಿಯಾದಿಂದ ತಾಳೆ ಎಣ್ಣೆ ಖರೀದಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ