ಮಾಲಿ :
ದೇಶದಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ಕಾರಣದಿಂದ ಮಾಲಿಯ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಸರ್ಕಾರಿ ಟೆಲಿವಿಷನ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ 75 ವರ್ಷದ ಇಬ್ರಾಹಿಂ ಬೌಬಾಕರ್ ಕಿಟಾ. ಸರ್ಕಾರ ಹಾಗೂ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಮಾಲಿಯಲ್ಲಿ ಆಡಳಿತಾರೂಢ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ ಭುಗಿಲೆದ್ದ ಹಿನ್ನಲೆಯಲ್ಲಿ ಕಿಟಾ ತಲೆದಂಡವಾಗಿದೆ.ಕಳೆದ ಜುಲೈ ತಿಂಗಳಿನಿಂದ ಮಾಲಿಯಲ್ಲಿ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿದ್ದರು. ರಾಜಧಾನಿ ಬಮಾಕೊನಲ್ಲಿ ಹಲವು ಬಾರಿ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು. ಆಡಳಿತ ಸುಧಾರಣೆ ತರಲಾಗುತ್ತದೆ ಎಂಬ ಅಧ್ಯಕ್ಷರ ಭರವಸೆಯನ್ನು ಜನರು ತಿರಸ್ಕರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
