ವಾಷಿಂಗ್ಟನ್
ಅದ್ಭುತ ಪ್ರದರ್ಶನ ತೋರಿದ ಬ್ರಿಟಿಷ್ ಅಗ್ರ ಕ್ರಮಾಂಕದ ಆಟಗಾರ ಕೈಲ್ ಎಡ್ಮಂಡ್ ಹಾಗೂ ಮತ್ತೊಂದು ಪಂದ್ಯದಲ್ಲಿ ವಿಶ್ವ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಅವರು ಮಿಯಾಮಿ ಓಪನ್ ಅಂತಿಮ 16ರ ಹಂತಕ್ಕೆ ಪ್ರವೇಶಿಸಿದ್ದಾರೆ.
24ರ ಪ್ರಾಯದ ಕೈಲ್ ಎಡ್ಮಂಡ್ ಅವರು, ಕೆನಡಾದ ರಾಯ್ನಿಕ್ ಅವರನ್ನು 6-4, 6-4 ಅಂತರಗಳ ನೇರ ಸೆಟ್ನಿಂದ ಮಣಿಸಿದರು. ಆ ಮೂಲಕ ಮಿಯಾಮಿ ಓಪನ್ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಜಾನ್ ಐಸ್ನರ್ ಅವರ ವಿರುದ್ಧ ಸೆಣಸಲಿದ್ದಾರೆ.
ಐಸ್ನರ್ ಅವರು ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಅಲ್ಬರ್ಟ್ ರಾಮೋಸ್ ವಿನೋಲಾಸ್ ಅವರ ವಿರುದ್ಧ 7-5, 7-6 (7-6) ಅಂತರಗಳಿಂದ ಜಯ ಸಾಧಿಸಿದ್ದರು.
ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರು, ಅರ್ಜೆಂಟೀನಾದ ಫೆಡೆರಿಕೋ ಡೆಲ್ಬೊನಿಸ್ ವಿರುದ್ಧ 7-5, 4-6, 6-1 ಅಂತರಗಳಿಂದ ಮೂರನೇ ಸುತ್ತಿನಲ್ಲಿ ಜಯ ದಾಖಲಿಸಿ, ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರು ಅಂತಿಮ 16ರ ಹಂತದಲ್ಲಿ ಸ್ಪೇನ್ನ
ರಾಬರ್ಟೊ ಬಟಿಸ್ಟಾ ಅಗಟ್ ಅವರ ವಿರುದ್ಧ ಸೆಣಸಲಿದ್ದಾರೆ.
“ಉತ್ತಮ ಆರಂಭ ಪಡೆದರೂ ಪಂದ್ಯದಲ್ಲಿ ಹಲವು ಕೆಟ್ಟ ಸರ್ವಿಸ್ಗಳು ಒಳಗೊಂಡಿದ್ದವು. ನಾನು ತುಂಬಾ ನಿಷ್ಕ್ರಿಯವಾಗಿ ಆಡಿದ್ದೇನೆ. ಎದುರಾಳಿ ಆಟಗಾರ ಡೆಲ್ಬೊನಿಸ್, ಪರಿಣಾಮಕಾರಿಯಾಗಿ ಚೆಂಡನ್ನು ಸ್ವಿಂಗ್ ಮಾಡುತ್ತಿದ್ದರು. ಇದು ನಿಜಕ್ಕೂ ಅತ್ಯುತ್ತಮವಾಗಿತ್ತು” ಎಂದು ಜೊಕೊವಿಚ್ ಪಂದ್ಯದ ಬಳಿಕ ಹೇಳಿದ್ದಾರೆ.
” ಮೂರನೇ ಸೆಟ್ನ ಮೊದಲ ಎರಡು ಗೇಮ್ಗಳು ನಿರ್ಣಾಯಕವಾಗಿತ್ತು. ಇಂತಹ ಕ್ಲಿಷ್ಟ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸಿ ಎದುರಾಳಿ ಮೇಲೆ ತೀವ್ರ ಒತ್ತಡ ಹೇರಿದೆ. ಅಂತಿಮವಾಗಿ ಪಂದ್ಯವನ್ನೂ ಉತ್ತಮವಾಗಿ ಮುಗಿಸಿದೆ” ಎಂದರು.