ವಾಷಿಂಗ್ಟನ್:
ವಕೀಲ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ ಬಿಲ್ ಗೇಟ್ಸ್ ಸೀನಿಯರ್ (94) ಸೋಮವಾರ ಸಿಯಾಟಲ್ ಪ್ರದೇಶದ ಹುಡ್ ಕೆನಾಲ್ ನಲ್ಲಿರುವ ತಮ್ಮ ಬೀಚ್ ಹೌಸ್ ನಲ್ಲಿ ನಿಧನರಾದರು. ನವೆಂಬರ್. 30, 1925, ವಾಷಿಂಗ್ಟನ್‌ನ ಬ್ರೆಮರ್ಟನ್‌ನಲ್ಲಿ ಜನಿಸಿದ್ದ ವಿಲಿಯಂ ಹೆನ್ರಿ ಗೇಟ್ಸ್ II ವಿಶ್ವದ ಅತಿದೊಡ್ಡ ಫಿಲಾಂಥ್ರೆಪಿಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಗೇಟ್ಸ್ ಸೀನಿಯರ್ ಗೆ 69 ವರ್ಷ ವಯಸ್ಸಿನವರಾಗಿದ್ದ ವೇಳೆ ಒಂದು ದಿನ ಅವರು ಹಾಗೂ ಅವರ ಪುತ್ರ ಬಿಲ್ ಹಾಗೂ ಸೊಸೆ ಮಿಲಿಂಡಾ ಚಲನಚಿತ್ರಕ್ಕೆ ಹೋದಾಗ ಟಿಕೆಟ್ ಕೊಳ್ಳಲು ಕ್ಯೂನಲ್ಲಿ ನಿಂತು, ಬಿಲ್ ತನ್ನ ತಂದೆಗೆ ನನಗೆ ಚಾರಿಟಿಗಾಗಿ ಹಲವಾರು ಕೋರಿಕೆಗಳು ಬರುತ್ತಿದೆ ಆದರೆ ಮೈಕ್ರೋಸಾಫ್ಟ್ ನಡೆಸುವುದರಲ್ಲಿ ನನಗೆ ಬಿಡುವಿಲ್ಲದಂತಾಗಿದೆ ಎಂದಿದರು. ಆಗ ಗೇಟ್ಸ್ ಸೀನಿಯರ್ ಈ ಫೌಂಡೇಷನ್ ನ ಕಲ್ಪನೆ ಕೊಟ್ಟಿದ್ದರು.
“ನನ್ನ ತಂದೆ ‘ನಿಜವಾದ’ ಬಿಲ್ ಗೇಟ್ಸ್. ನಾನು ಏನಾಗಲು ಪ್ರಯತ್ನಿಸುತ್ತಿದ್ದೆನೋ ಎಲ್ಲವೂ ಅವರಾಗಲೇ ಆಗಿದ್ದಾರೆ. ಮತ್ತು ನಾನು ಅವರನ್ನು ಪ್ರತಿದಿನ ಕಾಣುವುದರಿಂದ ವಂಚಿತನಾಗಿದ್ದೇನೆ” ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
