ಸೌದಿ ಅರೇಬಿಯಾ:
ಸೌದಿ ಅರೇಬಿಯಾದ ಪ್ರಮುಖ ವಾಣಿಜ್ಯ ಬಂದರಾಗಿರುವ ಜೆಡ್ಡಾದಿಂದ 96 ಕಿಮಿ ದೂರದಲ್ಲಿ ಇರಾನ್ ಮೂಲದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿಯಾಗಿದೆ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ.
ಹಡಗಿಗೆ ಬೆಂಕಿ ತಗುಲಿ ಭಾರೀ ಹಾನಿಯಾಗಿದೆ ಮತ್ತು ಬಂದರಿನಿಂದ ಈ ಸ್ಥಳವು ಕೇವಲ 60 ಮೈಲಿ ದೂರದಲ್ಲಿದೆ ಮತ್ತು ಈ ಅವಘಡದಿಂದ ಕಚ್ಚಾ ಸೋರಿಕೆಯ ಭೀತಿ ಎದುರಾಗಿದೆ.ಶಂಕಿತ ದಾಳಿಯೂ ರೆಡ್ ಸೀ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಟ್ಯಾಂಕರ್ ಗಳನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾಗಿದೆ.
ದಾಳಿಯ ಮಾಹಿತಿಯನ್ನು ಅದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಎಸ್ ನೌಕಾಪಡೆಯ ಐದನೇ ಫ್ಲೀಟ್ ತಿಳಿಸಿದೆ ಮತ್ತು ಸದ್ಯದ ಪರಿಸ್ಥತಿಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಈ ದಾಳಿ ಕುರಿತಾಗಿ ಸೌದಿ ಅರೇಬಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇರಾನ್ ಮೂಲಗಳ ಪ್ರಕಾರ ಿದೊಂದು “ಭಯೋತ್ಪಾದಕ” ದಾಳಿ ಎನ್ನಲಾಗಿದೆ ಸದ್ಯ ಎಣ್ಣೆ ಸೀಗೆಕಾಯಿಯಂತಿರುವ ಸೌದಿ ಇರಾನ್ ಸಂಬಂಧ ಈ ದಾಳಿಯಿಂದ ಮತ್ತಷ್ಟು ಹಳಸುವ ಮುಸ್ಸೂಚನೆ ಇದೆ ಎಂದು ಮಾಧ್ಯಮಗಳು ತತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ