ಫಿನ್ ಟೆಕ್ ನಲ್ಲಿ ಮೋದಿ

ಸಿಂಗಾಪುರ:
 
          ವಿಶ್ವದ ಮುಂದೆ ಭಾರತ ಪ್ರಸ್ತುತ ಪಡಿಸುತ್ತಿರುವ ಯೋಚನೆಗಳಾಗಿರಬಹುದು ಅಥವಾ ಮಾದರಿ ರಾಜಕೀಯ ತಂತ್ರಗಳಿರಬಹುದು ಇದನ್ನು ಕಂಡ ವಿಶ್ವ ಭಾರತಕ್ಕೆ ಸಲಾಮ್ ಹೊಡೆಯುತ್ತಿದೆ ಜೊತೆಗೆ ಡಿಜಿಟಲ್ ಪೇಮೆಂಟ್ ನ ಕ್ರಾಂತಿಯಾಗುತ್ತಿದ್ದು, ಇದರಿಂದ ದೇಶಕ್ಕೆ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
          ಸಿಂಗಾಪುರದಲ್ಲಿ ನಡೆಯುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ನಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಯುಗ ಆರಂಭವಾಗಿದ್ದು, ಭಾರತ ಕೂಡ ಇದಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲೀಕರಣದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ. ಸಿಂಗಾಪುರ ಆರ್ಥಿಕತೆಯ ವಿಷಯದಲ್ಲಿ ಮುಖ್ಯ ಹಬ್‌ ಆಗಿದ್ದು ಹಣಕಾಸು ವಿಷಯದಲ್ಲಿ ಡಿಜಿಟಲೀಕರಣಕ್ಕೆ ಈ ದೇಶ ಸಾಕಷ್ಟು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಆಯೋಜನೆ ಮಾಡುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ವಿಶ್ವಾಸದ ಪ್ರತೀಕವಾಗಿದೆ ಎಂದು ಸಿಂಗಾಪುರ್ ಸಾಧನೆಯನ್ನು ಹೊಗಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap