ಕೌಲಲಂಪುರ್
ನಮ್ಮ ದೇಶದ ಮಿತ್ರ ರಾಷ್ಟ್ರ ಹಾಗು ಭಾರತಕ್ಕೆ ತಾಳೆ ಎಣ್ಣೆ ರಫ್ತು ರಾಷ್ಟ್ರವಾಗಿರುವ ಮಲೇಷಿಯಾದ ಪ್ರಧಾನ ಮಂತ್ರಿಯಾಗಿರುವ ಮಹತೀರ್ ಮೊಹಮ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಈ ರಾಜಿನಾಮೆ ಸರ್ಕಾರ ಪತನದ ಭೀತಿಯಿಂದ ನೀಡಿಲ್ಲಾ ಎಂದಿದ್ದಾರೆ ಮಹತೀರ್ ಮೊಹಮದ್.ತಮ್ಮ ರಾಜೀನಾಮೆ ಪತ್ರವನ್ನು ಮಲೇಷಿಯಾದ ರಾಜರಾದ ಅಬ್ದುಲಾ ಆಫ್ ಪಹಾಂಗ್ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮಹತೀರ್ ಮೊಹಮ್ಮದ್ ಅವರು ತಮ್ಮ ಉತ್ತರಾಧಿಕಾರಿತಾಗಿ ಅನ್ವರ್ ಇಬ್ರಾಹಿಂರನ್ನು ನೇಮಿಸಿ ಹೊಸ ಸರ್ಕಾರ ರಚಿಸಲು ಮುಂದಾಗಿದ್ದರು. ಆದರೆ, ಮೈತ್ರಿಕೂಟ ಇದಕ್ಕೆ ಅಡ್ಡಿಪಡಿಸಿತ್ತು. ಹೀಗಾಗಿ, ತಮ್ಮ ಸ್ಥಾನಕ್ಕೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ. 222 ಸ್ಥಾನಗಳುಳ್ಳ ಸಂಸತ್ತಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ಕನಿಷ್ಠ 112 ಸ್ಥಾನಗಳು ಬೇಕಿವೆ. 1981 ರಿಂದ 2003 ರ ಅವಧಿಯಲ್ಲಿ ಮಹತೀರ್ ಪ್ರಧಾನಿಯಾಗಿದ್ದಾಗ ಅನ್ವರ್ ಅವರು ಉಪ ಪ್ರಧಾನಿಯಾಗಿದ್ದರು. ಆದರೆ, 1998ರಲ್ಲಿ ಅನ್ವರ್ ಅಮಾನತುಗೊಳಿಸಿ, ಜೈಲಿಗೆ ಕಳಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
