ಕಜಕಿಸ್ತಾನ : ಕೊರೋನಾಗಿಂತ ಅತಿ ಅಪಾಯಕಾರಿ ವೈರಸ್ ಪತ್ತೆ ..!

ಬೀಜಿಂಗ್

    ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ.

     ಕೊರೋನಾಗಿಂತ ನೂರಾರು ಪಟ್ಟು ಅಪಾಯಕಾರಿ ಮತ್ತು ಪ್ರಾಣಾಂತಕ ವೈರಸ್ ವೊಂದು ಜನ್ಮತಾಳಿದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕಜಕಿಸ್ತಾನದಲ್ಲಿ ಈ ಅನಾಮಧೇಯ ಮತ್ತು ಪ್ರಾಣಾಂತಕ ವೈರಸ್ ಜನ್ಮ ತಾಳಿದ್ದು ಕಳೆದ 6 ತಿಂಗಳಲ್ಲಿ ಈ ವೈರಸ್ ಗೆ ಆ ದೇಶದಲ್ಲಿ  1,772 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಜೂನ್ ತಿಂಗಳೊಂದರಲ್ಲಿಯೇ 628 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೆಂಟ್ರಲ್ ಏಷ್ಯಾದ ಚೀನಾದ ರಾಯಭಾರ ಕಚೇರಿ ಹೇಳಿದೆ.

    ಈ ಬಗ್ಗೆ ತಮ್ಮ ದೇಶದ ಚಾಟಿಂಗ್ ಆ್ಯಪ್ ಆದ ವಿ-ಚಾಟ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ರಾಯಭಾರ ಕಚೇರಿ, ಕಜಕಿಸ್ಥಾನದಲ್ಲಿ ಈ ವೈರಸ್ ಗೆ ಬಲಿಯಾದವರ ಪೈಕಿ ಚೀನಾ ದೇಶದ ನಿವಾಸಿಗಳು ಕೂಡ ಇದ್ದಾರೆ. ಪ್ರಸ್ತುತ ಪತ್ತೆಯಾಗಿರುವ ಈ ಅನಾಮಧೇಯ ವೈರಸ್ ನ ಜೀವಹಾನಿ ಪ್ರಮಾಣ ಕೋವಿಡ್-19ಗಿಂತಲೂ ಹೆಚ್ಚಾಗಿದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

   ಪ್ರಸ್ತುತ ಈ ನಿಗೂಢ ಮತ್ತು ಅನಾಮಧೇಯ ವೈರಸ್ ಕುರಿತಂತೆ ಜಗತ್ತಿನ ಸಾಕಷ್ಟು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ಕಜಕಿಸ್ತಾನ ಆರೋಗ್ಯ ಇಲಾಖೆ ಅಧ್ಯಯನ ನಡೆಸುತ್ತಿದ್ದು, ಇದು ಕೊರೋನಾ ವೈರಸ್ ನ ರೂಪಾಂತರವೇ ಅಥವಾ ಇದೇ ಬೇರೆ ಜಾತಿಯ ವೈರಸ್ ಆಗಿರಬಹುದೇ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.  ಕಜಕಿಸ್ತಾನದಲ್ಲಿರುವ ಈ ವೈರಸ್ ಜಗತ್ತಿನ ಇತರೆ ದೇಶಗಳಿಗೆ ವ್ಯಾಪಿಸದಂತೆ ತುರ್ತು ಕ್ರಮ ಕೈಗೊಳ್ಳಬೇಕಿದ್ದು, ಇದೇ ಕಾರಣಕ್ಕೆ ಚೀನಾ ತನ್ನ ವಾಯುವ್ಯ ಭಾಗದ ಚೀನಾ-ಕಜಕಿಸ್ತಾನ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಕಜಕಿಸ್ತಾನದಲ್ಲಿರುವ ರಾಯಭಾರ ಕಚೇರಿ ಈ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದ್ದು, ಈ ಅನಾಮಧೇಯ ವೈರಸ್ ನ ಪ್ರಸರಣವನ್ನು ಈ ಕೂಡಲೇ ತಡೆಯಬೇಕಿದೆ ಎಂದು ಹೇಳಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap