ರಮಲ್ಲಾ:
ವಿಶ್ವ ಶಾಂತಿ ದಿನವಾಗಿ ಆಚರಿಸಲ್ಪಡುವ ಶ್ರೀ ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ಅಂಗವಾಗಿ ಪ್ಯಾಲೆಸ್ಟೈನ್ ಸರ್ಕಾರ ವಿಶೇಷ ಅಂಚೇ ಚೀಟಿ ಬಿಡುಗಡೆ ಮಾಡಿದೆ ಈ ಮೂಲಕ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗೌರವ ಸಮರ್ಪಣೆ ಮಾಡಿದೆ.
ಪ್ಯಾಲೆಸ್ಟ್ಮೈನ್ ಸರ್ಕಾರ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಮಂಗಳವಾರ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಪ್ಯಾಲೆಸ್ಟೈನ್ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








