ನ್ಯೂಯಾರ್ಕ್:
ಕರೋನಾ ಕಾರಣದಿಂದ ಮೃತಪಟ್ವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದು ನಿಂತಿದೆ. ನ್ಯೂಯಾರ್ಕ್ ಟೈಮ್ಸ್ ನಲ್ಲಿ ದೇಶದಲ್ಲಿ ಕೊರೋನಾದಿಂದ ಮೃತಪಟ್ಟ 1,000 ಜನರ ಹೆಸರನ್ನು ಪ್ರಕಟಿಸಿ ಇದನ್ನು ಲೆಕ್ಕಹಾಕಲಾಗದ ನಷ್ಟ ಎಂದೂ ಪತ್ರಿಕೆ ಬರೆದಿದೆ. “ಅವರು ಕೇವಲ ಪಟ್ಟಿಯಲ್ಲಿ ಹೆಸರುಗಳು ಮಾತ್ರವಲ್ಲ ಅವರು ನಮ್ಮವರು” ಎಂದು ಪತ್ರಿಕೆ ಬಹಳ ಅಭಿಮಾನದಿಂದ ಸತ್ತವರನ್ನು ಸ್ಮರಿಸಿಕೊಂಡಿದೆ.
ಅಮೆರಿಕಾದಲ್ಲಿ ಕೊರೋನಾ ವೈರಸ್ ಪ್ರಭಾವವನ್ನುಸಂಖ್ಯೆಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 100,000ಕ್ಕೆ ತಲುಪಿದೆ – ಬಹುತೇಕ ಎಲ್ಲರೂ ಮೂರು ತಿಂಗಳ ಅವಧಿಯಲ್ಲಿ. ದಿನಕ್ಕೆ ಸರಾಸರಿ 1,100 ಕ್ಕೂ ಹೆಚ್ಚು ಸಾವುಗಳು ಎಂದು ಪತ್ರಿಕೆ ನಾಲ್ಕು ಪೂರ್ಣ ಪುಟಗಳಲ್ಲಿ ಮುದ್ರಿಸಿದೆ.
ಅಮೆರಿಕದಲ್ಲಿ ಈವರೆಗೆ ಕರೋನ ಸೊಂಕಿನಿಂದ 99,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇದು ವಿಶ್ವದಲ್ಲೆ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.