ಮತ್ತೆ ನಗೆಪಾಟಲಿಗೀಡಾದ ಪಾಕಿಸ್ಥಾನ ಪ್ರಧಾನಿ ಟ್ವೀಟ್ ..!

ಪಾಕಿಸ್ಥಾನ:

   ನಿನ್ನೆ ರಾತ್ರಿ ಪಾಕ್ ಪ್ರಧಾನಿ ಮಾಡಿರುವ ಒಂದು ಟ್ವೀಟ್ ಈಗ ನಟ್ಟಿಗರಿಂದ ತೀವ್ರವಾಗಿ ಟ್ರೋಲ್ ಆಗುತ್ತಿದೆ ಯಾಕೆಂದರೆ ಯಾವುದೋ ಹಳೆಯ ವಿಡಿಯೋವನ್ನು ಹಾಕಿ ಇದು ಇಂದಿ ಭಾರತದ ವಸ್ತು ಸ್ಥಿತಿ ಎಂದು ಹೇಳಲು ಹೋಗಿ ಅವಮಾನಕ್ಕೀಡಾಗಿದೆ .

   ‘ಭಾರತೀಯ ಪೊಲೀಸರು ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಇಮ್ರಾನ್ ಖಾನ್ ಶುಕ್ರವಾರ ರಾತ್ರಿ ಭಾರತಕ್ಕೆ ಸಂಬಂಧವೇಪಡದ ಹಳೆಯ ವಿಡಿಯೊ ತುಣುಕನ್ನು ಟ್ವೀಟ್ ಮಾಡಿ ವಿಶ್ವದ ಎದುರು ನಗೆಪಾಟಲಿಗೀಡಾದರು.

      ‘ಪಾಕಿಸ್ತಾನದ ನನಕಾನಾ ಸಾಹಿಬ್ ಗುರುದ್ವಾರದ ಮೇಲೆ ಪುಂಡರು ದಾಳಿ ನಡೆಸಿದ್ದಾರೆ. ಅಲ್ಲಿರುವ ಸಿಖ್ಖರಿಗೆ ರಕ್ಷಣೆ ಕೊಡಿ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಅವರಿಗೆ ಮನವಿ ಮಾಡಿದ್ದರು. ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ವಿನಂತಿಸಿದ್ದರು.ಅಮರಿಂದರ್ ಸಿಂಗ್ ವಿನಂತಿ ಮಾಡಿದ ಕೆಲ ಸಮಯದ ನಂತರ ಇಮ್ರಾನ್ ವಿವಾದಿತ ವಿಡಿಯೊ ಟ್ವೀಟ್ ಮಾಡಿ, ‘ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ಬಿಂಬಿಸಲು ಯತ್ನಿಸಿದ್ದರು.
    ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದ ವಿಡಿಯೊದಲ್ಲಿದ್ದ ಪೊಲೀಸರ ರಕ್ಷಣಾ ಉಪಕರಣದ ಮೇಲೆ ಬಾಂಗ್ಲಾದೇಶ ಪೊಲೀಸರ ‘ರ‍್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್’ (ಆರ್‌ಎಬಿ) ಎಂಬ ಬರಹ ಇತ್ತು. 2013ರಲ್ಲಿ ಬಾಂಗ್ಲಾ ಪೊಲೀಸರ ದೌರ್ಜನ್ಯ ಒಕ್ಕಣೆಯೊಂದಿಗೆ ಈ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಆಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link