ಪಾಕ್‌ ಮಾಜಿ ರಾಷ್ಟ್ರಪತಿ ಬಂಧನ..!!

ಇಸ್ಲಾಮಾಬಾದ್‌

   ಪಾಕಿಸ್ತಾನದ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ(ಎನ್‌ಎಬಿ) ದೇಶದ ಮಾಜಿ ರಾಷ್ಟ್ರಪತಿ ಮತ್ತು ಪಾಕಿಸ್ತಾನ ಪೀಪಲ್‌ ಪಕ್ಷದ ಉಪಾಧ್ಯಕ್ಷ ಅಸಿಫ್‌ ಅಲಿ ಜರ್ದಾರಿ ಅವರನ್ನು ನಕಲಿ ಬ್ಯಾಂಕ್‌ ಖಾತೆ ಪ್ರಕರಣವೊಂದರಲ್ಲಿ ಬಂಧಿಸಿದೆ.

    ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಎನ್‌ಎಬಿ ತಂಡ ಜರ್ದಾರಿ ಅವರ ಇಸ್ಲಾಮಾಬಾದ್‌ ನಿವಾಸಕ್ಕೆ ದಾಳಿ ನಡೆಸಿ ಅವರನ್ನು ಬಂಧಿಸಿದೆ.

    ನ್ಯಾಯಮೂರ್ತಿ ಅಮೀರ್‌ ಫಾರೂಕ್‌ ನೇತೃತ್ವದ ಇಸ್ಲಾಮಾಬಾದ್‌ ಹೈಕೋರ್ಟ್‌ ಪೀಠ ಪ್ರಕರಣದಲ್ಲಿ ಜರ್ದಾರಿ ಮತ್ತವರ ಕುಟುಂಬದ ಮಧ್ಯಂತರ ಜಾಮೀನು ವಿಸ್ತರಣೆ ಅರ್ಜಿ ತಿರಸ್ಕರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹೈಕೋರ್ಟ್‌ ಎನ್‌ಎಬಿಗೆ ಜರ್ದಾರಿ ಬಂಧನಕ್ಕೆ ಅನುಮತಿ ನೀಡಿತ್ತು.ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಪ್ರಕರಣ ಇದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap