ಇಸ್ಲಾಮಾಬಾದ್
ಪಾಕಿಸ್ತಾನ ನಡೆಸಿದ ಹೀನ ಕೃತ್ಯಕ್ಕೆ ಪಾಕಿಸ್ತಾನದೊಂದಿಗೆ ಮುಂಚೆ ರಚಿಸಿಕೊಂಡಿದ್ದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರು ಪರಿಷ್ಕರಣೆ ಮಾಡುವುದಕ್ಕಾಗಿ ಮುಂದಾಗಿದ್ದ ಭಾರತಕ್ಕೆ ಪಾಕಿಸ್ತಾನ ಪ್ರತ್ಯುತ್ತರ ನೀಡಿದೆ.
ಈ ಹಿಂದೆ ಅಂದರೆ 1960 ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಿಷ್ಕರಣೆ ಮಾಡಿ ಇಲ್ಲಿಯವರೆಗೂ ಪಾಕ್ ಗೆ ಹರಿಯುತ್ತಿದ್ದ ನೀರನ್ನು ಭಾರತದ ಮೂರು ರಾಜ್ಯಗಳತ್ತ ತಿರುಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿಗಳ ನೀರನ್ನು ತಿರುಗಿಸಿ ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಗಳಿಗೆ ಹರಿಸುವುದು ಭಾರತದ ಯೋಜನೆಯಾಗಿದೆ .
ಈ ಕುರಿತು ಮಾತನಾಡಿರುವ ಪಾಕಿಸ್ತಾನ ಜಲ ಸಂಪನ್ಮೂಲಗಳ ಸಚಿವಾಲಯ ಕಾರ್ಯದರ್ಶಿ ಖ್ವಾಜಾ ಶುಮೇಲ್, ಒಂದು ವೇಳೆ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಪರಿಷ್ಕರಣೆಗೆ ಮುಂದಾದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
