ಇಸ್ಲಾಮಾಬಾದ್:
ಕಾಶ್ಮೀರ ವಿಷಯವಾಗಿ ಭಾರತದೊಂದಿಗಿನ ಉದ್ವಿಗ್ನತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪಾಕಿಸ್ತಾನಕ್ಕೆ ಸೂಚನೆ ನೀಡಿದರೂ ಸಹ ಇಮ್ರಾನ್ ಖಾನ್ ಅವರು ಭಾರತದೊಂದಿಗೆ ಮಾತನಾಡುವುದೆಲ್ಲಾ ಇಲ್ಲಾ ಎಂಬಂತೆ ಘಜ್ನವಿ ಎನ್ನುವ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿದೆ ಎಂದು ವರದಿಯಾಗಿದೆ.
ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿ ಸುಮಾರು 290 ಕಿಲೋಮೀಟರ್ ವರೆಗೆ ವಿವಿಧ ರೀತಿಯ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ ಎಂದು ಪಾಕಿಸ್ತಾನ ಮೂಲಗಳು ತಿಳಿಸಿವೆ. ಮತ್ತು ತಡರಾತ್ರಿಯಲ್ಲಿ ಇದರ ಪರಿಕ್ಷಾ ಉಡಾವಣೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ ಮತ್ತು ಇದಕ್ಕಾಗಿ ಇಮ್ರಾನ್ ಖಾನ್ ವಿಜ್ಞಾನಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಎರಡು ತಿಂಗಳ ಅವಧಿಯಲ್ಲಿ ಭಾರತ -ಪಾಕ್ ಪೂರ್ಣ ಪ್ರಮಾಣದ ಯುದ್ದ ನಡೆಯಲಿದೆ ಎಂದು ಪಾಕ್ ಸಚಿವರ ಹೇಳಿಕೆ ಬಂದ ಬೆನ್ನಲ್ಲೆ ಈ ಉಡಾವಣೆ ಪಾಕಿಸ್ತಾನದ ಯುದ್ಧಕ್ಕೆ ಸದಾ ಸಿದ್ದನಾಗಿದ್ದೇನೆ ಎಂದು ಹೇಳಿದಂತಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
