ಇಸ್ಲಾಮಾಬಾದ್:
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನ ಸದ್ಯದಲ್ಲಿ ಶೋಚನೀಯ ಪರಿಸ್ಥತಿಗೆ ತಲುಪಿದ್ದರೂ ಕೆಲ ತಿಂಗಳಿದೀಚೆಗೆ ಇಮ್ರಾನ್ ಖಾನ್ ಸರ್ಕಾರ ಹೊಸ ದಾಖಲೆ ಮಾಡಿದೆ.
ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನ ಇದರಿಂದ ಹೊರ ಬರುವ ಸಲುವಾಗಿ ಆರ್ಥಿಕ ನೆರವು ನೀಡುವಂತೆ ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಮುಂದೆ ಕೈ ಚಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೂ ವಿವಿಧ ಸಂಪನ್ಮೂಲದಿಂದ ಸುಮಾರು 7 ಬಿಲಿಯನ್ ನಷ್ಟು ಸಾಲ ಮಾಡಿಕೊಂಡಿದೆ.
ಇಮ್ರಾನ್ ಖಾನ್ ಸರ್ಕಾರ 2018 ರ ಆಗಸ್ಟ್ ನಿಂದ 2019ರ ಆಗಸ್ಟ್ ವರೆಗೆ ಸರಿಸುಮಾರು 7,509 ಬಿಲಿಯನ್ ಪಾಕಿಸ್ತಾನದ ರೂಪಾಯಿ ಸಾಲ ಮಾಡಿದೆ ಎನ್ನಲಾಗಿದ್ದು, ಈ ಪೈಕಿ ವಿದೇಶಗಳಿಂದ ಪಡೆದ ಸಾಲ 2,804 ಬಿಲಿಯನ್ ಇದೆ, ಸ್ಥಳೀಯ ಮೂಲಗಳಿಂದ 4,705 ಬಿಲಿಯನ್ ಸಾಲ ಪಡೆದಿದೆ ಎಂದು ವರದಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
