ಸಂಸತ್ ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ

ಕೊಲೊಂಬೊ: 
 
      ನೆರೆಯ ಮಿತ್ರ ರಾಷ್ಟ್ರ ಶ್ರೀಲಂಕಾದ ರಾಜಕೀಯ ಬಿಕ್ಕಟ್ಟು ಈಗಲೂ ಮುಂದುವರೆದ ಕಾರಣ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಶ್ರೀಲಂಕಾ ಸಂಸತ್ ಅನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.ಎರಡು ವಾರಗಳಿಂದ ಆಪತ್ಕಾಲ ಪ್ರಧಾನಿ ಮತ್ತು ಮಾಜಿ ಪ್ರಧಾನಿ ನಡುವಿನ ಬಿಕ್ಕಟ್ಟು ಮುಗಿಯುವ ಲಕ್ಷಣಗಳು ಕಾಣಿಸದ ಹಿನ್ನಲೆ ಈ ಆದೇಶ ಹೊರಡಿಸಿದ್ದಾರೆ. 
      ಈ ಹಿಂದೆ ಶ್ರೀಲಂಕಾದ ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರನ್ನು ಅಮಾನತು ಮಾಡಿ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಲಾಗಿತ್ತು. ಅಲ್ಲಿಂದ ಸಾಂವಿಧಾನಿಕ ಬಿಕ್ಕಟ್ಟು ಆರಂಭವಾಗಿತ್ತು . ಇನ್ನು ರಾಜಪಕ್ಸೆ ಅವರ ಅಧಿಕಾರ ಅರಳುವ ಮುನ್ನವೇ ಮೊಟಕುಗೊಂಡಿದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ರಾಜಪಕ್ಸೆ ಅವರು ಅಗತ್ಯ ಬಹುಮತ ಗಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ವಿಸರ್ಜಿಸುವುದು ಲಂಕಾ ಅಧ್ಯಕ್ಷರಿಗೆ ಅನಿವಾರ್ಯವಾಗಿತ್ತು. ಇದರೊಂದಿಗೆ ಲಂಕಾದ 225 ಸದಸ್ಯ ಬಲದ ಲೋಕಸಭೆ ಇವತ್ತು ಮಧ್ಯರಾತ್ರಿಗೆ ಅಂತ್ಯವಾಗಲಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link