ದಯಮಾಡಿ ರೊಟ್ಟಿ ದರ ಇಳಿಸಿ : ಪಾಕ್ ಪ್ರಧಾನಿ ಮನವಿ..!!

ಇಸ್ಲಾಮಾಬಾದ್

      ನೆರೆ ಪಾಕಿಸ್ಥಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಮುಂದುವರಿದ ಸಾರ್ವಜನಿಕರ ಅಸಮಾಧಾನದ ಮಧ್ಯೆ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಸರ್ಕಾರವು ಮತ್ತೊಂದು ಹೊಸ ನಿರ್ಣಯ ಕೈಗೊಂಡಿದೆ. 

     ಅದೇನೆಂದರೆ ಪಾಕಿಸ್ತಾನದಲ್ಲಿ ರೊಟ್ಟಿ ಮತ್ತು ನಾನ್ ಬೆಲೆಗಳು ಏರುಮುಖವಾಗಿರುವುದರಿಂದ ಅದನ್ನು ತಗ್ಗಿಸುವ ಉದ್ದೇಶದಿಂದ ರಸ್ತೆ ಬದಿಯ ಹೋಟೆಲ್ ಗಳಿಗೆ ಪೂಊರೈಕೆಯಾಗುತ್ತಿರುವ ಅನಿಲದ ಮೇಲಿನ ಹೆಚ್ಚುವರಿ ಸುಂಕವನ್ನು ಹಿಂದಕ್ಕೆ ತೆಗೆದುಕೊಂಡಿದೆ.

    ವಿದೇಶಿ ವಿನಿಮಯದ ಕೊರತೆ ಮತ್ತು ಆರ್ಥಿಕ ಬೆಳವಣಿಗೆ ಸ್ಥಗಿತಗೊಳುವ ಸ್ತಿತಿ ಎದುರಾಗಿರುವುದರಿಂದ ಪಾಕಿಸ್ತಾನವು ೀ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ. ದೇಶವು ಸುಸ್ಥಿರ ಬೆಳವಣಿಗೆಗೆ ಮರಳಲು ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸಲು ಪಾಕಿಸ್ತಾನಕ್ಕೆ ಮೂರು ವರ್ಷಗಳ ಅವಧಿಯಲ್ಲಿ 6 ಬಿಲಿಯನ್ ಡಾಲರ್ ಸಾಲವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಘೋಷಿಸಿದ್ದು. ಕಠಿಣ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಪಾಕಿಸ್ತಾನ ಮರಳಿ ಪೂರ್ವ ವೈಭವಕ್ಕೆ ತರುವ ಪ್ರಯತ್ನ ಶುರುವಾಗಿದೆ, ಪೆಟ್ರೋಲ್, ಅನಿಲ ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗಿದ್ದು, ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ.

    ಬೀದಿ ಬದಿಯ ಹೋಟೆಲ್ ಗಳಿಗೆ ಅನಿಲವನ್ನು ಈ ಹಿಂದಿನ ಬೆಲೆಗೆ ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಮತ್ತು ಇದನ್ನು ಸಂಪುಟದ ಆರ್ಥಿಕ ಸಮನ್ವಯ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ, ಇನ್ನು “ನಾನ್ ಮತ್ತು ರೊಟ್ಟಿ” ಬೆಲೆಗಳನ್ನು ಕಡಿಮೆ ಮಾಡುವಂತೆ ಪ್ರಧಾನಿ ಖಾನ್ ಹೋಟೆಲ್ ಮಾಲೀಕರಿಗೆ ಮನವಿ ಮಾಡಿದ ನಂತರ ಈ ಸಭೆ ಕರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

      ಪ್ರಸ್ತುತ ನಾನ್ ದೇಶದ ವಿವಿಧ ನಗರಗಳಲ್ಲಿ 12 ರಿಂದ 15 ರೂ.ಗೆ ಮಾರಾಟವಾಗುತ್ತಿದೆ. ಹೇಗಾದರೂ, ಅನಿಲ ಸುಂಕ ಮತ್ತು ಗೋಧಿ ಹಿಟ್ಟಿನ ದರಗಳು ಹೆಚ್ಚಾಗುವ ಮೊದಲು, ನಾನ್ ಬೆಲೆ 8 ರಿಂದ 10 ರೂ. ವರೆಗೆ ಇತ್ತು. ಅದೇ ರೀತಿ, ರೊಟ್ಟಿ ಈಗ 10 ರಿಂದ 12 ರೂ.ಗೆ ಮಾರಾಟವಾಗುತ್ತಿದ್ದರೆ, ಅದರ ಹಿಂದಿನ ದರ 7 ರಿಂದ 8 ರೂ ಇತ್ತು . ಮತ್ತು ಸರ್ಕಾರದ ನಿರ್ದೇಶನದ ಪ್ರಕಾರ ಹೋಟೆಲ್ ಮಾಲೀಕರು ಬೆಲೆ ಇಳಿಸಲಾಗಲಿ ಅಥವಾ ಅನಿಲದ ಬೆಲೆಯ ಹೊರೆಯನ್ನು  ಭರಿಸಲಾಗಲಿ ವಿಫಲವಾದರೆ ಮುಂದೆ ಇನ್ನೊಮ್ಮೆ ಚರ್ಚಿಸಲು ಸಮಿತಿ ನಿರ್ಧರಿಸಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap