ಹೆಲ್ಸಿಂಕಿ:
ಫಿನ್ಲೆಂಡ್ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಲು ದೇಶಕ್ಕೆ ಹೊಸ ಪ್ರಧಾನಿಯಾಗಿ ಸನಾ ಮರಿನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸ್ವೀಡಿಶ್ ಪೀಪಲ್ಸ್ ಪಾರ್ಟಿ ತಿಳಿಸಿದೆ . ರಿನ್ನೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಈ ಹಿಂದೆ ಸಾರಿಗೆ ಸಚಿವರಾಗಿದ್ದ ಅನುಭವವಿದ್ದ ಸನಾ ಅವರನ್ನು ಸೋಷಿಯಲ್ ಡೆಮಾಕ್ರೆಟಿಕ್ ಪಕ್ಷ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದೆ.
ಈ ಬೆಳವಣಿಗೆಯಿಂದಾಗಿ ಸನಾ ಅವರು ಅತ್ಯುನ್ನತ ಪದವಿ ಅಲಂಕರಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏತನ್ಮಧ್ಯೆ, ಸೋಷಿಯಲ್ ಡೆಮೋಕ್ರಾಟ್ಸ್-ಸೆಂಟರ್ ಪಾರ್ಟಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಗ್ಗೆ ರೆನ್ನಿಯವರ ಟೀಕೆ ಅಂಚೆ ನೌಕರರ ವೇತನ ಕಡಿತದ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನಾಂದಿ ಹಾಡಿದೆ. ರೆನೆ ರಾಜೀನಾಮೆ ನೀಡುವಂತೆ ಕೂಗು ಕೆಳಿಬಂದ ಹಿನ್ನೆಲೆಯಲ್ಲಿ ರೆನ್ನಿ ಅವರಿಂದ ತೆರವಾದ ಸ್ಥಾನಕ್ಕೆ ಸನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಆಯ್ಕೆಯಾದ ನಂತರ ಸನಾ ಮಾತನಾಡಿ ನಾನು ಸವಾಲುಗಳನ್ನು ಎದುರಿಸಲು ನಾನು ಸದಾ ಸಿದ್ದಳಿದ್ದೇನೆ ಮತ್ತು ಈ ವಿಷಯದಲ್ಲಿ ನಾನು ಮಹಿಳೆ ಅಥವಾ ನನ್ನ ವಯಸ್ಸನ್ನು ಎಂದು ಮಾಪನವಾಗಿ ಬಳಸಿಲ್ಲ ಮತ್ತು ನಾನು ರಾಜಕೀಯಕ್ಕೆ ಬಂದದ್ದು ಜನರ ನಂಬಿಕೆಯನ್ನು ನೋಡಿ ಅವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದಲೇ ಹೊರತು ಸ್ವಲಾಭಕ್ಕಾಗಿ ಅಲ್ಲ ಎಂದು ತಿಳಿಸಿದರು.ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದೇ ನನ್ನಗುರಿಯಾಗಿದೆ ಎಂದು ಹೇಳಿದರು.ಇನ್ನು ಸನಾ ಅವರು ಮಂಗಳವಾರ ಫಿನ್ಲೆಂಡ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ