ಚೀನಾ ಧೂತವಾಸದ ಮೇಲೆ ಗುಂಡಿನ ದಾಳಿ…

ಕರಾಚಿ:
         ಪಾಕಿಸ್ತಾನ ಚೀನಾದ ಬಳಿ ಅಂಗಲಾಚಿ ಬೇಡಿಕೊಳ್ಳುತ್ತಿರುವ ಸಂದರ್ಭದಲ್ಲಿ ತನ್ನ ಆಪ್ತ ಮಿತ್ರ ಎಂದೇ ಕರೆಸಿಕೊಳ್ಳುವ ಚೀನಾ ರಾಯಭಾರಿ ಕಚೇರಿ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. 
         ಇಂದು ಮುಂಜಾನೆ ಮುಸುಧಾರಿಗಳಾಗಿ ಬಂದ 4 ಬಂಧೂಕುಧಾರಿಗಳು ಚೀನಾ ರಾಯಭಾರಿ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ, ಕೂಡಲೇ ಎಚ್ಚೆತ್ತ ದೂತವಾಸದ ಭದ್ರತಾ ಸಿಬ್ಬಂದಿ ದಾಳಿಗೆ ಪ್ರತಿ ದಾಳಿ ಮಾಡಿದ್ದಾರೆ ಎಂದು ಪಾಕಿಸ್ತಾನ ಪೊಲೀಸ್ ಇಲಾಖೆ ತಿಳಿಸಿದೆ. ಈ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಪಿರ್ ಮುಹಮ್ಮದ್ ಶಾಹ್ ಅವರು ತಿಳಿಸಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link