ವಾಷಿಂಗ್ಟನ್:
ಕೊರೋನಾ ವೈರಸ್ ಕಣ್ಣಿಗೆ ಕಾಣದ ಹೊಸ ಶತ್ರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ ಮತ್ತು ಈ ವರ್ಷದ ಅಂತ್ಯಕ್ಕೆ ಕೊರೋನಾ ಲಸಿಕೆ ತಯಾರಾಗಲಿದೆ ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ನಡೆದ ರಿಪಬ್ಲಿಕನ್ ನೇಷನ್ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾ ಸೇರಿದಂತೆ ಇಡೀ ವಿಶ್ವ ಕಣ್ಣಿಗೆ ಕಾಣದ ಹೊಸ ಶತ್ರುವಿನಿಂದ ನಲುಗಿದ್ದು, ಧೈರ್ಯಶಾಲಿ ಅಮೆರಿಕಾ ಜನತೆ ಈ ಸವಾಲನ್ನು ದಿಟ್ಟತೆಯಿಂದ ಎದುರಿಸುತ್ತೇವೆ ಎಂದರು.
ವರ್ಷಾಂತ್ಯಕ್ಕೂ ಮುಂಚಿತವಾಗಿ ಲಸಿಕೆಯನ್ನು ತಯಾರಿಸಲಿದ್ದೇವೆ. ಕೊರೋನಾ ವೈರಸ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಿ ಹಿಂದೆದಿಗಿಂತಲೂ ಬಲವಾಗಿ ಹೊರಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ. ಅವುಗಳನ್ನು ನಾವು ಮುಂಚಿತವಾಗಿ ಉತ್ಪಾದಿಸುತ್ತಿರುವುದರಿಂದ ಅನೇಕ ಡೋಸ್ ಗಳ ದೊರೆಯಲಿವೆ. ಈ ವರ್ಷ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಹೊಂದುತ್ತೇವೆ. ಒಟ್ಟಾಗಿ ಕೋವಿಡ್ ನ್ನು ತೊಲಗಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ