ಮಿಸ್ ಯುನಿವರ್ಸ್ ಆಗಿ ದಕ್ಷಿಣ ಆಫ್ರಿಕಾದ ಸುಂದರಿ ಆಯ್ಕೆ …!

ಅಟ್ಲಾಂಟಾ:

    ದಕ್ಷಿಣ ಆಫ್ರಿಕಾದ ಮೂಲದ ಜೋಜಿಬಿನಿ ತುಂಜಿ (26) ಈ ವರ್ಷ ಮಿಸ್ ಯುನಿವರ್ಸ್ ಆಗಿ ಆಯ್ಕೆಯಾಗಿ ಇಡೀ ವಿಶ್ವಕ್ಕೆ ಆಶ್ಚರ್ಯ ಉಂಟುಮಾಡಿದ್ದಾರೆ.

    ತೊಂಬತ್ತು ಸೌಂದರಿಯರ ಮಧ್ಯ ದಕ್ಷಿಣ ಆಫ್ರಿಕಾದ ತುಂಜಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದು. ಜನಪ್ರಿಯ ಟಿವಿ ವ್ಯಕ್ತಿತ್ವ ಸ್ಟೀವ್ ಹಾರ್ವೆ ಅಮೆರಿಕದ ಅಟ್ಲಾಂಟಾದ ಟೈಲರ್ ಪೆರ್ರಿ ಸ್ಟುಡಿಯೋದಲ್ಲಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು. ಏಳು ಮಹಿಳೆಯರನ್ನೊಳಗೊಂಡ ತೀರ್ಪುಗಾರರ ಪೀಠವು ಈ ನಿರ್ಣಯ ತೆಗೆದುಕೊಂಡಿದೆ ಇನ್ನು ಜೊಜಿಬಿನ್ ಅವರಿಗೆ ಫೈನಲ್‌ನಲ್ಲಿ ಪೋರ್ಟೊ ರಿಕನ್ ಮತ್ತು ಮೆಕ್ಸಿಕನ್ ದೇಶದ ಸುಂದರಿಯರು ತೀವ್ರ ಪ್ರತಿ ಸ್ಪರ್ಧೆ ಒಡ್ಡಿದರು ಅವರನ್ನು ಸೋಲಿಸಿ ಜೋಜಿಬಿನಿ ತುಂಜಿ ವಿಜೇತರಾಗಿದ್ದಾರೆ ಎಂದು ತೀರ್ಪುಗಾರರು ಘೋಷಿಸಿದ್ದಾರೆ.

     ತುಂಜಿ ಹೇಳುತ್ತಾರೆ ವಿಜೇತರಾದ ನಂತರ ಮಾತನಾಡುತ್ತಾ ನಾನು ಬೆಳೆದು ಬಂದದ್ದು ಎಲ್ಲಾ ಮಹಿಳೆಯರು ನನ್ನಂತೆಯೇ ಕಾಣುವ ಜಗತ್ತಿನಲ್ಲಿ. ನನ್ನ ದೇಹದ ಬಣ್ಣವು ಅದೇ ಆದರೆ, ನಮ್ಮಲ್ಲಿ ಯಾರೂ ಸೌಂದರ್ಯವನ್ನು ಪರಿಗಣಿಸುವುದಿಲ್ಲ. ಆ ಭಾವನೆ ಇಂದಿನಿಂದ ತೊಲಗಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಮುಖದಲ್ಲಿ ಪ್ರತಿಫಲಿಸುವ ನಿಮ್ಮ ಮುಖಗಳನ್ನು ನೋಡಿ ಎಂದು ತಮ್ಮ ದೇಶದ ಮಹಿಳೆಯರಿಗೆ ಆತ್ಮ ವಿಶ್ವಾಸ ತುಂಬಿದರಲ್ಲದೆ ನನ್ನಿಂದ ನನ್ನ ಜನರಿಗೆ ಕೈಲಾದ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.ಇನ್ನು ಕಳೆದಬಾರಿಯ ಮಿಸ್ ಯುನಿವರ್ಸ್ ಆಗಿದ್ದ ಫಿಲಿಪೈನ್ಸ್ ಮೂಲದ ಕ್ಯಾಟ್ರಿಯೋನಾ ಗ್ರೇ ಅವರು ನೂತನ ಮಿಸ್ ಯುನಿವರ್ಸ್ ಗೆ ಕಿರೀಟ ತೊಡಿಸುವ ಮೂಲಕ ವಿಜೆತರನ್ನಾಗಿ ಘೋಷಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap