ಲಂಡನ್:
ನನಗೆ ನಿಮ್ಮ ಹಣ ಬೇಡ ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದು ನನ್ನ ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು, ಪ್ರಮಾದ ಎಸಗಿಲ್ಲ ಬ್ಯಾಂಕ್ ಗಳೇ, ನಿಮಗೆ ಕೊಡಬೇಕಿರುವ, ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಬೆಂಗಳೂರು ಮೂಲದ ಮದ್ಯ ಉದ್ಯಮಿ ವಿಜಯ್ ಮಲ್ಯ ಅಲವತ್ತುಕೊಂಡಿದ್ದಾರೆ.
ಭಾರತಕ್ಕೆ ಗಡೀಪಾರು ಮಾಡುವ ಆದೇಶದ ವಿರುದ್ಧ ಬ್ರಿಟನ್ ಹೈಕೋರ್ಟ್ ನಲ್ಲಿ ಸಲ್ಲಿಸಿದ ಮೇಲ್ಮನವಿಯ ಮೂರು ದಿನಗಳ ವಿಚಾರಣೆಯ ನಂತರ ಈ ಕೋರಿಕೆ ಮುಂದಿಟ್ಟಿದ್ದಾರೆ.
ಬ್ಯಾಂಕ್ ಗಳಿಂದ ಪಡೆದ 9 ಸಾವಿರ ಕೋಟಿ ರೂಪಾಯಿ ವಾಪಾಸು ಮಾಡದೇ ವಂಚಿಸಿದ ಆರೋಪ ಎದುರಿಸುತ್ತಿರುವ ಕಿಂಗ್ ಫಿಶರ್ಸ್ ಸಮೂಹದ ಮುಖ್ಯಸ್ಥ, “ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒಂದೇ ಆಸ್ತಿಗಾಗಿ ಜಗಳವಾಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ನನ್ನನ್ನು ವಿವೇಚನಾಯುಕ್ತವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆಪಾದಿಸುತ್ತಿದ್ದಾರೆ.
ನಾನು ಹಣ ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕ್ ಗಳ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಇಡಿ ಸ್ವಯಂಪ್ರೇರಿತವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು, ಅಪರಾಧ ಮಾಡಿಲ್ಲ ಎಂದು ಮಲ್ಯ ಸಮರ್ಥಿಸಿಕೊಳ್ಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ