ಇಸ್ಲಾಮಾಬಾದ್:
ವಿಶ್ವದ ನಿದ್ದೆ ಕೆಡಿಸಿದ್ದ ಉಗ್ರ ಸಂಘಟನೆ ತಾಲಿಬಾನ್ ಹುಟ್ಟುಹಾಕಿ ವಿಶ್ವದದಲ್ಲಿ ಸಾವಿರಾರು ಜನರ ಮಾಟಣಹೋಮಕ್ಕೆ ಕಾರಣನಾಗಿದ್ದ ಪಾಕಿಸ್ತಾನದ ಉಗ್ರ ಮೌಲಾನಾ ಸಮೀ-ಉಲ್ ಹಕ್ ನನ್ನು ಅಪರಿಚಿತರ ಗುಂಪೊಂದು ಅವನದೇ ಮನೆಯಲ್ಲಿ ಚಾಕುವಿನಿಂದ ಇರಿದು ಕೊಂದ ಘಟನೆ ವರದಿಯಾಗಿದೆ ಈ ಹತ್ಯೆಯಿಂದ ಉಗ್ರವಾದಕ್ಕೆ ತೀವ್ರ ಹೊಡೆತ ಬಿದ್ದಿರುವುದಂತು ನಿಜ ಮತ್ತು ಅಕ್ಕ ಪಕ್ಕದ ರಾಷ್ಟ್ರಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಂತು ನಿಜ .
ಈತನನ್ನು ತಾಲಿಬಾನ್ ಉಗ್ರರು ಪಿತಾಮಹ ಎಂದೇ ಕರೆಯುತ್ತಿದ್ದರು ಪಾಕಿಸ್ತಾನದಲ್ಲಿ ಈತ ಒಬ್ಬ ಧಾರ್ಮಿಕ ಗುರುವಾಗಿ ಹಾಗೂ ಮಾಜಿ ಸೆನೇಟರ್ ಆಗಿ ಮೌಲಾನಾ ಸಮೀ-ಉಲ್ ಹಕ್ ಸೇವೆ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ ಆದರೆ ಇಷ್ಟು ದಿನ ಬೇರೆಯವರ ಸಾವಿನಲ್ಲಿ ಆನಂದ ಕಂಡ ಉಗ್ರನನ್ನು ಆತನ ಮನೆಯಲ್ಲೇ ಚಾಕುವಿನಿಂದ ಆತನ ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ. ಸಮೀ ಉಲ್ ಹಕ್ ಪುತ್ರ ಹಮೀದ್-ಉಲ್-ಹಕ್ ತಂದೆಯ ಕೊಲೆಯ ಬಗ್ಗೆ ದೃಢಪಡಿಸಿದ್ದು, ರಾವಲ್ಪಿಂಡಿಯಲ್ಲಿರುವ ಸಮೀ ಉಲ್-ಹಕ್ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.