ಪಾಕಿಸ್ತಾನ:
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ದಶಕಗಳಿಂದ ಪಾಕಿಸ್ತಾನದಲ್ಲಿ ಭೇರೂರಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಉಗ್ರ ಸಂಘಟನೆಯೊಂದು ಹೆಸರು ಬದಲಾಯಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಪ್ಯಾರೀಸ್ ಮೂಲದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್ ನಿರ್ಬಂಧದಿಂದ ಪಾರಾಗಲು ಪಾಕಿಸ್ತಾನಕ್ಕೆ ಇದೊಂದೇ ಮಾರ್ಗ ಉಳಿದಿತ್ತು.ಭಾರತಕ್ಕೆ ಬೇಕಾಗಿರುವ ಉಗ್ರ ಹಫೀಜ್ ಸಯೀದ್ ನಾಯಕತ್ವದ ಲಷ್ಕರ್ ಎ ತೊಯ್ಬಾ ಸಂಘಟನೆ ಹೊಸ ಹೆಸರಿನೊಂದಿಗೆ ಹೊಸ ಅವತಾರದೊಂದಿಗೆ ಬಂದಿದೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಮತ್ತೆ ಅವಕಾಶ ದೊರೆತಿತ್ತು. ಆದರೆ ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವ ಷರತ್ತಿನ ಎಚಚ್ರಿಕೆಯನ್ನೂ ನೀಡಿತ್ತು. ಪಾಕಿಸ್ತಾನ ಎಫ್‌ಎಟಿಎಫ್‌ನ ಬೂದು ಪಟ್ಟಿಗೆ ಸೇರಿದ್ದರ ಪರಿಣಾಮ ಇಸ್ಲಾಮಾಬಾದ್‌ಗೆ 10 ಶತಕೋಟಿ ಡಾಲರ್‌ನಷ್ಟು ನಷ್ಟ ಉಂಟಾಗಿದೆ.
ಒಂದೊಮ್ಮೆ ಕ್ರಿಯಾ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಕಪ್ಪುಪಟ್ಟಿಗೆ ಸೇರಲಿದೆ.ಜಾಗತಿಕವಾಗಿ ಕೊವಿಡ್ 19 ಪರಿಸ್ಥಿತಿಯ ತೀವ್ರತೆ ಹೆಚ್ಚುತ್ತಿರುವ ಕಾರಣ ಅದನ್ನು ತಡೆಯಲು ಅನೇಕ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಇದರಲ್ಲಿ ದಿಗ್ಬಂಧನ , ಪ್ರಯಾಣ, ನಿರ್ಬಂಧ, ನಿಗದಿತ ಭೌಗೋಳಿಕ ವ್ಯಾಪ್ತಿಯನ್ನೇ ಸೀಲ್‌ಡೌನ್ ಮಾಡುವ ಕೆಲಸಗಳೂ ಆಗಿವೆ.
