ಬೀಜಿಂಗ್:
ಕೊರೋನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮುಂಚಿತವಾಗಿಯೇ ಮಾಹಿತಿ ನೀಡುವಲ್ಲಿ ಚೀನಾ ವಿಳಂಬ ಮಾಡಿತು ಎಂಬ ಸುದ್ದಿಗಳು ವಾಸ್ತವಕ್ಕೆ ದೂರವಾದವು ಎಂದು ಚೀನಾ ಹೇಳಿದೆ.ವಿದೇಶಾಂಗ ಅಧಿಕಾರಿ ಜಾವೊ ಲಿಜಿಯಾನ್ ಬುಧವಾರ ಮಾಧ್ಯಮಗಳು ಕೇಳಿದ ಹಲವು ಪ್ರಶ್ನೆಗಳಿಗೆ ಈ ಉತ್ತರ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ವೈರಸ್ ಪ್ರಸರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಯಾವುದೇ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸೋಂಕು ಹಬ್ಬುವುದರ ಮಾಹಿತಿ ಹಂಚಿಕೊಳ್ಳಲು ಚೀನಾ ವಿಳಂಬ ಮಾಡಿದ್ದರಿಂದ ಡಬ್ಲ್ಯುಎಚ್ಓ ನಿರಾಶೆಗೊಂಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಮಂಗಳವಾರ ವರದಿ ಮಾಡಿತ್ತು.
ಕೊರೋನಾ ಮಹಾಮಾರಿಗೆ ಜಗತ್ತಿನಾದ್ಯಂತ 3.83 ಲಕ್ಷ ಮಂದಿ ಬಲಿಯಾಗಿದ್ದಾರೆ. ಇನ್ನು 64.86 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 31 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.