ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ಮಟ್ಟುವ ಸಾಧ್ಯತೆ ಇದೆ : WHO

ಜಿನಿವಾ:

     ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷ  ಮತ್ತು ಮೃತರ ಸಂಖ್ಯೆ  50 ಸಾವಿರದ ಗಡಿದಾಟುವ ಸಾಧ್ಯತೆ ಇದೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸೋಂಕಿತರ ಸಂಖ್ಯೆಯಲ್ಲಿ ಅತಿವೇಗದ ಏರಿಕೆಯಾಗುತ್ತಿದೆ ಹಾಗೂ ಜಾಗತಿಕವಾಗಿ ಸೋಂಕು ವ್ಯಾಪಿಸುತ್ತಿರುವುದು ತೀವ್ರ ಕಳವಳ ಉಂಟು ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. 

     ‘ಕಳೆದ ಐದು ವಾರಗಳಲ್ಲಿ ಸೋಂಕು ದೃಢಪಡುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಏರು ಮುಖವಾಗಿದೆ ಹಾಗೂ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕಳೆದ ವಾರ ದುಪ್ಪಟ್ಟಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳು 10 ಲಕ್ಷ ಮುಟ್ಟಲಿವೆ ಹಾಗೂ ಸಾವಿಗೀಡಾಗುವವರ ಸಂಖ್ಯೆ 50,000ಕ್ಕೆ ಏರಿಕೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ .ಜಗತ್ತಿನಾದ್ಯಂತ ಸೋಂಕು ದೃಢಪಟ್ಟ ಪ್ರಕರಣಗಳು 9,39,181 ತಲುಪಿದ್ದು, ಸೋಂಕಿನಿಂದಾಗಿ 47,118 ಮಂದಿ ಸಾವಿಗೀಡಾಗಿದ್ದಾರೆ. ಚಿಕಿತ್ಸೆಯ ಬಳಿಕ ಗುಣಮುಖರಾದವರ ಸಂಖ್ಯೆ 1,90,816 ಆಗಿದೆ. ಚೇತರಿಕೆ ಕಂಡಿರುವವರ ಪ್ರಮಾಣ ಶೇ 20ರಷ್ಟಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link