ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ :ಸಾವಿನ ಸಂಖ್ಯೆ 25ಕ್ಕೆ

ಬಾಗ್ದಾದ್:

      ಇಷ್ಟು ದಿನ ಶಾಂತವಾಗಿ ನಡೆಯುತ್ತಿದ್ದ ಇರಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಇರಾಕ್ ಸೇನೆ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಈವರೆಗೂ 25 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

     ಸಾಮಾಜಿಕ ಉದ್ಯೋಗ ಭದ್ರತೆ ಕಲ್ಪಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ದ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದ್ದವು. ಆದರೆ ಸೈನಿಕರ ಮಧ್ಯ ಪ್ರವೇಶದೊಂದಿಗೆ ಇದೀಗ ಪ್ರತಿಭಟನೆ ಇದೀಗ ಹಿಂಸಾರೂಪಕ್ಕೆ ತಿರುಗಿದ್ದು, ಉತ್ತರ ಇರಾಕ್ ಇದೀಗ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

    ಸೈನಿಕರು ಮತ್ತು ಪ್ರತಿಭಟನಾ ನಿರತರ ನಡುವಿನ ಕಾಳಗದಲ್ಲಿ ಈ ವರೆಗೂ ಸುಮಾರು 25 ಮಂದಿ ಪ್ರತಿಭಟನಾ ಕಾರರು ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ನಿಟ್ಟಿನಲ್ಲಿ ಸೈನಿಕರು ಸಿಡಿಸಿದ್ದ ಅಶ್ರುವಾಯು ಪ್ರಯೋಗ, ತುರ್ತು ಪ್ರಹಾರದಳ ಗಳ ಕಾರ್ಯಾಚರಣೆಗೆ ಮಣಿಯದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಹೀಗಾಗಿ ಉತ್ತರ ಇರಾಕ್ ಗೆ ಮತ್ತಷ್ಟು ಸೇನೆಯನ್ನು ಕಳುಹಿಸಿ ಅಲ್ಲಿ ಶಾಂತಿ ಕಾಪಾಡಲು ಪ್ರಯತ್ನಿಸುವುದಾಗಿ ಇರಾಕ್ ಸರ್ಕಾರ ಹೇಳಿದೆ.ಇನ್ನು ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಇರಾಕ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಜಮಿಲ್ ಅಲ್ ಶಮ್ಮಾರಿ ವಿಫಲವಾಗಿರುವ ಹಿನ್ನಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮೆಹ್ದಿ ಅವರನ್ನು ಅವರನ್ನು ಸೇನಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap