ಆಶಿಂಗ್ಟನ್
ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ತಳೆದ ನಿರ್ಧಾರವು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಇದು ಇದು ಮಿತ್ರ ರಾಷ್ಟ್ರಗಳೊಂದಿಗೆ ದ್ವೈಪಾಕ್ಷಿಕ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೇರಿಕದಲ್ಲಿನ ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಣಯ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಯನ್ನು ಭಾರತೀಯ ಸಂಸತ್ತು ಮಂಗಳವಾರ ಅಂಗೀಕರಿಸಿದರ ವಿಚಾರವಾಗಿ ಭಾರತದ ಪರವಾಗಿ ನಿಲುವನ್ನು ಸ್ಪಷ್ಟ ಪಡಿಸಿದ ಅವರು ಇದು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಇದರಿಂದ ಯಾವುದೇ ರೀತಿ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ನಿರ್ಧಾರದಿಂದ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೇಲೆ ಯಾವುದೇ ತೊಂದರೆಯಾಗಲಿ ಹಾನಿಯಾಗಲಿ ಆಗುವುದಿಲ್ಲ ಮತ್ತು ಈ ಕ್ರಮವು ಉತ್ತಮ ಆಡಳಿತವನ್ನು ಗುರಿಯಾಗಿರಿಸಿಕೊಂಡು ತೆಗೆದುಕೊಳ್ಳಲಾಗಿದೆ ಎಂದು ಅಮೇರಿಕದ ಭಾರತೀಯ ರಾಯಭಾರಿ ಹರ್ಷ ವರ್ಧನ್ ಶ್ರೀಂಗ್ಲಾ ಅವರು ಮಂಗಳವಾರ ವಾಷಿಂಗ್ಟನ್ ತಿಳಿಸಿದದ್ದಾರೆ.
“ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ತಮ್ಮದೇ ಆದ ಸಂವಿಧಾನ ಮತ್ತು ಶಾಸಕಾಂಗ ಹೊಂದಿತ್ತು ಆದರೆ ಅಲ್ಲಿದ್ದ ನಿಬಂಧನೆಗಳಿಂದಾಗಿ ಶಾರೀರಿಕವಾಗಿ ಭಾರತದೊಂದಿಗೆ ಇದ್ದರೂ ಮಾನಸಿಕವಾಗಿ ಬೇರೆಯೇ ಇದ್ದ ಜುಮ್ಮು-ಕಾಶ್ಮೀರವನ್ನು ರಾಷ್ಟ್ರಪತಿಗಳ ಅಂಕಿತದೊಂದಿಗೆ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವುದು ಆಡಳಿತಾತ್ಮಕ ನಿರ್ಧಾರವಾಗಿದೆ ”ಎಂದು ಶ್ರಿಂಗ್ಲಾ ಹೇಳಿದರು.